ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟವಾಗುವ ತ್ರೈಮಾಸಿಕ ‘ಹಿಂಗಾರ’ ಪುಸ್ತಕ 6 ಸಂಚಿಕೆಗಳ ಒಟ್ಟು ‘ಸಂಯುಕ್ತ ಸಂಚಿಕೆ’ಯನ್ನು ಹೊರತರಲು ಉದ್ದೇಶಿಸಲಾಗಿದೆ.
ಈ ಸಂಬಂಧ ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಹನಿಗವನ, ಜನಪದ, ಸಂಸ್ಕøತಿ, ಕಲೆ, ಸಾಹಿತ್ಯ, ವ್ಯಕ್ತಿಚಿತ್ರ ಮತ್ತಿತರ ವಿಚಾರಗಳ ಕುರಿತು ಬರಹಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು “ಅರೆಭಾಷೆ ಬರಹ’ ಗಳನ್ನು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿ, ಕಾಫಿ ಕೃಪಾ ಕಟ್ಟಡ, 1ನೇ ಮಹಡಿ, ರಾಜಾಸೀಟು ರಸ್ತೆ, ಮಡಿಕೇÀರಿ 571 201 ಇಲ್ಲಿಗೆ ಅಂಚೆ ಅಥವಾ ಇ-ಮೇಲ್ (arebaseacademy@gmail.com) ಮೂಲಕ ತುರ್ತಾಗಿ ಕಳುಹಿಸಲು ಕೋರಿದೆ.
ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ, ಕೊಡಗು ಜಿಲ್ಲೆ, ಮೊ ನಂ 6362588677 ಇಲ್ಲಿಂದ ಪಡೆಯಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.