ಧಾರವಾಡ : ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ, ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾದ ಎಮ್‍ಎಸ್‍ಟಿಸಿ ಲಿಮಿಟೆಡ್‍ನ ಇ-ಪೋರ್ಟಲ್ ನಲ್ಲಿ ಇ-ಹರಾಜು ಮಾಡಲು ಎಮ್‍ಎಸ್‍ಟಿಸಿ https://www.mstcecommerce.com ನಲ್ಲಿ ಬಿಡ್ಡುಗಳನ್ನು ಆಹ್ವಾನಿಸಲಾಗಿದೆ.
ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ (ಎಲ್‍ಓಎ) ನೀಡುವ ವರ್ಷವನ್ನೂ ಒಳಗೊಂಡಂತೆ ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.
ಕರ್ನಾಟಕ ರಾಜ್ಯದ್ಯಾಂತ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಿದ್ದು, ಧಾರವಾಡ ಜಿಲ್ಲೆಗೆ ಒಟ್ಟು 15 ಸಿಎಲ್-2ಎ(ಎಸ್‍ಸಿ-ಎ-1, ಎಸ್‍ಸಿ-ಬಿ-1, ಎಸ್‍ಸಿ-ಸಿ-1, ಎಸ್‍ಟಿ-1/ ಜನರಲ್-11) ಹಾಗೂ 4 ಸಿಎಲ್-9ಂ ಸನ್ನದುಗಳನ್ನು ಜನರಲ್ ಕೆಟಗೆರಿ (General Category) ಹಂಚಿಕೆ ಮಾಡಿರುತ್ತಾರೆ. ಡಿಸೆಂಬರ್ 22, 2025 ರಿಂದ ಬಿಡ್ಡುದಾರರ ನೋಂದಣಿ ಪ್ರಕ್ರಿಯೆ ಆನ್‍ಲೈನ್‍ನಲ್ಲಿ ಪ್ರಾರಂಭವಾಗಿರುತ್ತದೆ.
ಸದರಿ ವಿಷಯದ ಕುರಿತು ಜನೆವರಿ 05, 2026 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ರಾಯಾಪೂರ ಕೆ.ಎಮ್.ಎಫ್ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಆಯೋಜಿಸಲಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತ ರಮೇಶಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಂದಹಾಗೇ ಸಿಎಲ್-2 ಅಂದ್ರೆ ವೈನ್ ಶಾಪ್ ಆಗಿದ್ದರೇ, ಸಿಎಲ್-9 ಬಾರ್ ಅಂಡ್ ರೆಸ್ಟೋರೆಂಟ್ ಆಗಿರುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.








