ಚಿತ್ರದುರ್ಗ : ಚಳ್ಳಕೆರೆ ನಗರದ ಪಾವಗಡ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಪ್ರವೇಶಾತಿಗೆ ಇಎಂ, ಫಿಟ್ಟರ್, ವೆಲ್ಡರ್, ಎಂ ಇ ವಿ, ಸಿಎನ್‍ಸಿ ಹಾಗೂ ಇತರೆ ವೃತ್ತಿಗಳಿಗೆ ಎಸ್ ಎಸ್ ಎಲ್ ಸಿ ಪಾಸಾದಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಯುಕ್ತ ಅರ್ಹ ಅಭ್ಯರ್ಥಿಗಳು ಇದರ ಪಡೆದುಕೊಳ್ಳಲು ಕೋರಿದೆ.
ಅರ್ಜಿ ಸಲ್ಲಿಕೆ ಈಗಾಗಲೇ ಮೇ 09 ರಿಂದ ಪ್ರಾರಂಭವಾಗಿದ್ದು, ಮೇ. 28 ರವರೆಗೆ ಆನ್‍ಲೈನ್ www.cite.karnataka.gov.in ಇಲ್ಲಿಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಬಿ.ಎಂ.ಬಸವಣ್ಣ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9900398732, 8748884498, 9902372315 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.