ಉಜಿರೆ: ಇಲ್ಲಿನ ಧರ್ಮಸ್ಥಳ ಸಮೀಪದ ರುಡ್ ಸೆಟ್ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ದಿನಾಂಕ 01-09-2025ರಿಂದ 30-09-2025ರವರೆಗೆ 30 ದಿನಗಳ ಕಾಲ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯನ್ನು ಉಚಿತ ವಸತಿ, ಊಟದ ಜೊತೆಗೆ ನೀಡಲಾಗುತ್ತದೆ.
18ರಿಂದ 45 ವರ್ಷದ ಒಳಗಿನ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತರಬೇತಿ ಸಂಪೂರ್ಣ ಉಚಿತವಾಗಿದೆ. ತರಬೇತಿಯ ವೇಳೆಯಲ್ಲಿ ಸಂಸ್ಥೆಯ ಸಮವಸ್ತ್ರ ಮತ್ತು ಉದ್ಯೋಗ ಕೈಗೊಳ್ಳಲು ಟೂಲ್ ಕಿಟ್ ಉಚಿತವಾಗಿ ಕೊಡಲಾಗುತ್ತದೆ.
ಅರ್ಜಿಯನ್ನು 6364561982 ಸಂಖ್ಯೆಗೆ ವಾಟ್ಸ್ ಅಪ್ ಮಾಡಿ. ಇಲ್ಲವೇ www.rudsetujire.com ವೆಬ್ ಸೈಟ್ ಗೆ ಭೇಟಿ ನೀಡಿಯೂ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9980885900, 9380626695, 8861514706, 8296770307, 9591044014 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಶಿವಮೊಗ್ಗ: ಸೊರಬದ ತಳೇಬೈಲಿನಲ್ಲಿ ಭಾರೀ ಮಳೆಗೆ ಮನೆ ಕುಸಿತ, ಬೀದಿಗೆ ಬಿದ್ದ ಕುಟುಂಬ
ಕರ್ನಾಟಕದ ‘ಶಕ್ತಿ ಯೋಜನೆ’ಯು ‘ವಿಶ್ವ ದಾಖಲೆ’ಗೆ ಸೇರ್ಪಡೆ: ಅತೀವ ಸಂತಸ ತಂದಿದೆ ಎಂದ ‘ಸಾರಿಗೆ ಸಚಿವ’ರು