ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ಪುಸ್ತಕ ಬಹುಮಾನಗಳಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. 2024 ರ ಜನವರಿಯಿಂದ 2024ರ ಡಿಸೆಂಬರ್ ವರೆಗೆ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಕಡೆಯ ದಿನಾಂಕ ಆಗಸ್ಟ್ 20. 2025 ಆಗಿರುತ್ತದೆ.
1. ಕಾಕೋಳು ಸರೋಜಮ್ಮ ಪ್ರಶಸ್ತಿ (ಕಾದಂಬರಿ)
2. ಭಾಗ್ಯ ನಂಜಪ್ಪ ಪ್ರಶಸ್ತಿ (ವಿಜ್ಞಾನ ಸಾಹಿತ್ಯ,)
3. ನಾಗರತ್ನ ಚಂದ್ರಶೇಖರ್ ಪ್ರಶಸ್ತಿ (ಲಲಿತ ಪ್ರಬಂಧ) –
4. ಜಿ.ವಿ. ನಿರ್ಮಲ ಪ್ರಶಸ್ತಿ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ)
5. ಡಾ. ಬಿ. ಸಿ. ಶೈಲ ನಾಗರಾಜ್ ಕಾವ್ಯ ಪುರಸ್ಕಾರ (ಕಾವ್ಯಕ್ಕಾಗಿ, 50 ವರ್ಷದ ಒಳಗಿನವರಿಗಾಗಿ)
6. ಸಂಕಮ್ಮ ಸಂಕಣ್ಣನವರ್ ಹೆಸರಿನ ಕಾವ್ಯ ಪುರಸ್ಕಾರ
ಕಾವ್ಯಕ್ಕಾಗಿ
7. ‘ಶ್ರೀ ಜಯ’ (ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳಿಗಾಗಿ)
8. ಸುಶೀಲಾ ಸೋಮಶೇಖರ್ ಪ್ರಶಸ್ತಿ (ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳಿಗಾಗಿ)
9. ತ್ರಿವೇಣಿ ಸಾಹಿತ್ಯ ಪುರಸ್ಕಾರ
ಪ್ರಾಯೋಜಕರು – ಸುಧಾಮೂರ್ತಿ ಸಣ್ಣಕಥೆ/ ಕಾದಂಬರಿ
10. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ)
11. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ)
12. ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ.)
13. ಇಂದಿರಾ ವಾಣಿರಾವ್ (ನಾಟಕ)
14. ಜಯಮ್ಮ ಕರಿಯಣ್ಣ (ಸಂಶೋಧನೆ)
15. ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ)
16. ಉಷಾ. ಪಿ. ರೈ ಪ್ರಶಸ್ತಿ – (ಆತ್ಮಕಥನ)- (2022- 2023- 2024 ಈ ಮೂರು ವರ್ಷಗಳಲ್ಲಿ ಪ್ರಕಟಗೊಂಡ ಆತ್ಮಕಥನ ರೂಪದ ಕೃತಿಗಳು)
17. ನಿರುಪಮಾ (2024ರಲ್ಲಿ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು)
ಆಯ್ಕೆಯಾದ ಕೃತಿಗಳಿಗೆ ದಿ.13.09. 2025 ರಂದು ಶನಿವಾರ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್. ಎಲ್.ಪುಷ್ಪ ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮಗಳು
* ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.
* ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು.
*ಈಗಾಗಲೇ ಎರಡು ಪುಸ್ತಕ ಬಹುಮಾನ ಪಡೆದ ಲೇಖಕರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
*ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್.ಡಿ. ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
* ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.
* ಕೃತಿಗಳನ್ನು ಆಗಸ್ಟ್ ತಿಂಗಳ ದಿ.20. 8. 2025ರ ಒಳಗೆ ನಮಗೆ ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
* ಕೃತಿಗಳು ತಲುಪಬೇಕಾದ ವಿಳಾಸ: ಕರ್ನಾಟಕ ಲೇಖಕಿಯರ ಸಂಘ(ರಿ) ಬೆಂಗಳೂರು, ನಂ. 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2 ನೇ ಕ್ರಾಸ್, 2ನೇ ಮುಖ್ಯ ರಸ್ತೆ , ಚಾಮರಾಜಪೇಟೆ, ಬೆಂಗಳೂರು- 56 0 0 1 8
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಭಾರತಿ ಹೆಗಡೆ -8073765665. ಮಂಜುಳ ಶಿವಾನಂದ – 9480511714
ನೊಂದವರ ರಾಯಭಾರಿಗಳಾಗಿ ಸಮಾಜದ ಋಣ ತೀರಿಸೋಣ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್
ನನ್ನ, ಪ್ರಿಯಕರನ ಖಾಸಗಿ ವೀಡಿಯೋ ಪೋನಿನಲ್ಲಿವೆ ನೋಡಿ: ಆತ್ಮಹತ್ಯೆಗೆ ಶರಣಾದ ವಿವಾಹಿತೆ!