ಧಾರವಾಡ: ಧಾರವಾಡ ತೋಟಗಾರಿಕೆ ಇಲಾಖೆ ಹಾಗೂ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ (ಕುಂಬಾಪೂರ ಫಾರ್ಮ) ಧಾರವಾಡ ಇವರ ಸಹಯೋಗದೊಂದಿಗೆ ರೈತರ ಸರ್ವತ್ತೋಮುಖ ಅಭಿವೃದ್ಧಿಗಾಗಿ ಜೇನು ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಜುಲೈ 18, 2025 ರಂದು ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಜೈಜ್ಞಾನಿಕ ಜೇನು ಸಾಕಾಣಿಕೆ, ಜೇನಿನ ಉತ್ಪನ್ನಗಳು, ರಾಣಿ ಕಣಗಳ ಉತ್ಪಾದನೆ, ಇಳುವರಿ ಹೆಚ್ಚಿಸಲು ಜೇನು ನೊಣಗಳ ಪಾತ್ರ, ಸ್ಥಳಾಂತರ ಜೇನು ಕೃಷಿ ಹಾಗೂ ಜೇನಿನ ಶತ್ರುಗಳ ನಿರ್ವಹಣೆ, ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆಯನ್ನು ಅಳ್ನಾವರದ ಮಧುವನ ಕೇಂದ್ರದಲ್ಲಿ ನೀಡಲಾಗುವುದು. ಜೊತೆಗೆ ಜೇನು ಪೆಟ್ಟಿಗೆಯನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ.
ಆಸಕ್ತರು ರೈತರು ತರಬೇತಿಯಲ್ಲಿ ಭಾಗವಹಿಸಲು ಜುಲೈ 15, 2025 ರೊಳಗಾಗಿ ನೊಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾ.ತೋ.ಸಂ.ವಿ.ಕೇಂದ್ರ, ವಿಸ್ತರಣಾ ಮುಂದಾಳು ಡಾ. ಪಲ್ಲವಿ ಜಿ. ಮೊಬೈಲ್ ಸಂಖ್ಯೆ:7892770955 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ನೇಕಾರರ ಗಮನಕ್ಕೆ: ನೇಕಾರ ಸಮ್ಮಾನ್ ಯೋಜನೆಗೆ ಅರ್ಜಿ ಆಹ್ವಾನ, ಜುಲೈ.15 ಲಾಸ್ಟ್ ಡೇಟ್
ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ