ಆಗಸ್ಟ್ 1 ರಿಂದ ಭಾರತದಿಂದ ಆಮದಾಗುವ ಸರಕುಗಳ ಮೇಲೆ 25% ಸುಂಕವನ್ನು ವಿಧಿಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಭಾರತೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಗುರುವಾರ ಬೆಳಿಗ್ಗೆ ತೀವ್ರವಾಗಿ ಕುಸಿದವು.
ಬೆಳಿಗ್ಗೆ 9:20 ರ ಹೊತ್ತಿಗೆ, ಬಿಎಸ್ಇ ಸೆನ್ಸೆಕ್ಸ್ 604 ಪಾಯಿಂಟ್ಸ್ ಅಥವಾ 0.74% ಕುಸಿದು 81,668 ಕ್ಕೆ ತಲುಪಿದ್ದರೆ, ನಿಫ್ಟಿ 50 183 ಪಾಯಿಂಟ್ಸ್ ಅಥವಾ 0.73% ಕುಸಿದು 24,668 ಕ್ಕೆ ತಲುಪಿದೆ.