Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೆಕಾರ್ಡ್ ಲಾಭ ಗಳಿಸಿದರೂ ಉದ್ಯೋಗಿಗಳಿಗೆ ಗೇಟ್ ಪಾಸ್! 1,100 ಮಂದಿಯನ್ನು ಮನೆಗೆ ಕಳುಹಿಸಿದ ಕ್ಲೌಡ್‌ಫ್ಲೇರ್ | Cloudflare layoffs

ತೂಕ ಇಳಿಕೆಗೆ ಮತ್ತು ಜೀರ್ಣಕ್ರಿಯೆಗೆ ‘ಸೋರೆಕಾಯಿ’ ರಾಮಬಾಣ: ಈ ತರಕಾರಿಯ ಅದ್ಭುತ ಪ್ರಯೋಜನಗಳಿವು!

BIG BREAKING: ನಾಳೆ ಮಧ್ಯಾಹ್ನ 3.15ಕ್ಕೆ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ | TVK Chief Vijay

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್
KARNATAKA

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್

By kannadanewsnow09

ಬೆಂಗಳೂರು: ಗುರುವಾರದಂದು ನಡೆದ ʼ ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ʼದಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ₹51,469 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದ್ದು, ಈ ಸಂಬಂಧ ಒಪ್ಪಂದಗಳಿಗೆ ಸಹಿ ಮಾಡಿವೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ವಿವಿಧ ಕಂಪೆನಿಗಳ ಮುಖ್ಯಸ್ಥರು ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿ, ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ ಅವರು, ʼಈ ಹೊಸ ಹೂಡಿಕೆಗಳು ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ದಾವೋಸ್‌ ಶೃಂಗಸಭೆಗೆ ಹೊರತಾಗಿದ್ದು, ಕಳೆದ ಎರಡು ತಿಂಗಳ ಸತತ ಪ್ರಯತ್ನದ ಫಲ ಇದಾಗಿದೆ. ಬಂಡವಾಳ ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ಮುಂದೆಯೂ ಸುಸ್ಥಿರ ರೀತಿಯಲ್ಲಿ ನಡೆಯಲಿವೆ. ಈ ಹೂಡಿಕೆ ಬದ್ಧತೆಗಳಿಂದ ರಾಜ್ಯದಲ್ಲಿ 70,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ದೇಶದ ಕೈಗಾರಿಕಾ ಭೂಪಟದಲ್ಲಿ ಪ್ರಮುಖ ಕೈಗಾರಿಕಾ ಮತ್ತು ಉದ್ಯೋಗ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವಲ್ಲಿ ಈ ಬಂಡವಾಳ ಹೂಡಿಕೆಗಳು ಮಹತ್ವದ ಪಾತ್ರವಹಿಸಲಿವೆʼ ಎಂದು ತಿಳಿಸಿದ್ದಾರೆ.

ʼಬಂಡವಾಳ ಹೂಡಿಕೆಗೆ ಗುರುತಿಸಲಾಗಿರುವ ವಿವಿಧ ವಲಯಗಳು ಮತ್ತು ಹೂಡಿಕೆಯ ಮೊತ್ತವು, ರಾಜ್ಯದಲ್ಲಿನ ಕೈಗಾರಿಕಾ ಸ್ನೇಹಿ, ಸುಲಲಿತ ಉದ್ಯಮ ನೀತಿ, ಕುಶಲ ಮಾನವ ಸಂಪನ್ಮೂಲದ ವಿಪುಲ ಲಭ್ಯತೆ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯದಲ್ಲಿ ಉದ್ಯಮ ದಿಗ್ಗಜರು ಹೊಂದಿರುವ ದೃಢ ವಿಶ್ವಾಸದ ಪ್ರತೀಕವಾಗಿದೆʼ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ʼಏಕಸ್‌, ಅಲ್ಟ್ರಾವಯಲೆಟ್‌, ಎಸ್‌ಎಫ್‌ಒ ಟೆಕ್ನಾಲಜೀಸ್‌, ಮಹೀಂದ್ರಾ ಏರೊಸ್ಪೇಸ್‌, ಯಜಕಿ ಮುಂತಾದ ಕಂಪನಿಗಳ ಜೊತೆ ಹೂಡಿಕೆ ಒಪ್ಪಂದಕ್ಕೆ ಸಮಾವೇಶದಲ್ಲಿ ತಿಳಿವಳಿಕೆ ಒಪ್ಪಂದ ಪತ್ರಗಳಿಗೆ (ಎಂಒಯು) ಅಂಕಿತ ಹಾಕಲಾಗಿದೆ. ʼಕರ್ನಾಟಕ ಸರ್ಕಾರವು ಹೂಡಿಕೆ ಪ್ರೋತ್ಸಾಹದ ದಿಸೆಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿರುವುದರಿಂದ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆ ಆಕರ್ಷಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದʼ ಎಂದು ಸಚಿವರು ತಿಳಿಸಿದ್ದಾರೆ.

ಸಮಾವೇಶದಲ್ಲಿ ಪ್ರಮುಖ ಬಹುರಾಷ್ಟ್ರೀಯ ಉದ್ಯಮಗಳ ಹಾಗೂ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಉತ್ತೇಜನ ಕ್ರಮಗಳ ಪುನರುಚ್ಚಾರ ಉದ್ಯಮಗಳಿಗೆ ಸರ್ಕಾರ ನೀಡುತ್ತಿರುವ ಉತ್ತೇಜನ ಕ್ರಮಗಳನ್ನು ಸಮಾವೇಶದಲ್ಲಿ ಪುನರುಚ್ಚರಿಸಲಾಯಿತು.

ಅದರಲ್ಲೂ ವಿಶೇಷವಾಗಿ ಕೈಗಾರಿಕೆಗಳ ಬಳಕೆಗೆ ಲಭ್ಯವಿರುವ ಭೂಮಿಯ ವಿಸ್ತೀರ್ಣವನ್ನು ಕೈಗಾರಿಕಾ ಪಾರ್ಕ್‌ಗಳ ಮಟ್ಟದಲ್ಲಿ ಶೇಕಡ 68 ರಿಂದ ಶೇಕಡ 70ಕ್ಕೆ ಮತ್ತು ವೈಯಕ್ತಿಕ ನಿವೇಶನ ಮಟ್ಟದಲ್ಲಿ ಶೇಕಡ 34-44 ರಿಂದ ಶೇಕಡ 48-53 ಕ್ಕೆ ಹೆಚ್ಚಿಸಲು ವಲಯ ನಿಯಂತ್ರಣಗಳನ್ನು ಪರಿಷ್ಕರಿಸಿರುವುದನ್ನು ಉದ್ಯಮಿಗಳ ಗಮನಕ್ಕೆ ತರಲಾಯಿತು.

ರಾಜ್ಯದಾದ್ಯಂತ 20 ವಿಶೇಷ ಹೂಡಿಕೆ ಪ್ರದೇಶಗಳನ್ನು ಗೊತ್ತುಪಡಿಸಲಾಗಿದೆ. ಪ್ರತಿ ಪ್ರದೇಶದಿಂದ ಸಂಗ್ರಹಿಸಲಾದ ಆಸ್ತಿ ತೆರಿಗೆಯನ್ನು ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಅದೇ ಪ್ರದೇಶದಲ್ಲಿ ಮರುಹೂಡಿಕೆ ಮಾಡಲಾಗುತ್ತದೆ. ಹೊಸ ಏಕ ಗವಾಕ್ಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ರಾಜ್ಯದಲ್ಲಿ ಹೂಡಿಕೆಗಳನ್ನು ಸುಲಲಿಗೊಳಿಸಲು ಸುವ್ಯವಸ್ಥಿತ ವಿಧಾನ ಒದಗಿಸಲಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್‌. ಸೆಲ್ವಕುಮಾರ್‌ ಅವರು ಮಾತನಾಡಿದರು. ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿರುವ ಗುಂಜನ್‌ ಕೃಷ್ಣ‌ ಅವರು ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ಉಪಕ್ರಮಗಳನ್ನು ಪ್ರಸ್ತುತ ಪಡಿಸಿದರು. ಎಲ್ಲ 48 ಕಂಪನಿಗಳ ಮುಖ್ಯಸ್ಥರು ಒಡಂಬಡಿಕೆ ಪತ್ರಗಳನ್ನು ಸಚಿವರಿಂದ ಪಡೆದರು.

ಸಂಸ್ಥೆ ಹೆಸರು ಹೂಡಿಕೆ (₹ಕೋಟಿಗಳಲ್ಲಿ) ಉದ್ಯೋಗ

ಅನಂತ ಟೆಕ್ನಾಲಜೀಸ್ 500 ಕೋಟಿ 800
ಆಕ್ಷಿಸ್ ಕೇಡ್ಸ್ 500 1,500
ಸೆಂಟಮ್ 500 1500
ಹೇವಿಯಸ್ ಏರೋಟೆಕ್ 450 100
ಮಹೀಂದ್ರಾ ಏರೋಸ್ಪೇಸ್ 2000 3000
ನ್ಯೂಸ್ಪೇಸ್ 1100 1400
ನಿಬೇ 300 1000
ಪ್ಯಾನಾಟೋನಿ 240 1500
ಟ್ಯಾನ್ಬೊ 160 50
ಯುನಿಮೆಕ್ 1000 5000
ಆಸ್ಟೆಮೊ 1222 3030
ಆಮೊವಿಯೊ 500 300
ಕೆಪಿ ಗ್ರೂಪ್ 1021 800
ಅಲ್ಟ್ರಾವೈಲೆಟ್ 1000 1900
ಯಜಾಕಿ 255 150
ಎಪೊಕ್ ಟೆಕ್ 50 100
ಕೇನ್ಸ್ ಟೆಕ್ನಾಲಜೀಸ್ 350 –
ಮಿನಿ ಮೈನ್ಸ್ 350 1500
ಪೇಸ್ ಡಿಜಿಟೆಕ್ 1750 1500

Share. Facebook Twitter LinkedIn WhatsApp Email

Related Posts

ಸಾಲುಮರದ ತಿಮ್ಮಕ್ಕ ಸ್ಮಾರಕಕ್ಕೆ ಡಿಪಿಆರ್ ಸಿದ್ಧ: 25 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ- ಸಚಿವ ಈಶ್ವರ್ ಖಂಡ್ರೆ

1 Min Read

BREAKING : ಚಿಕ್ಕಬಳ್ಳಾಪುರದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ | Video Viral

1 Min Read

BIG NEWS : ‘ಯಡಿಯೂರಪ್ಪ ಅಭಿಮಾನೋತ್ಸವ’ಕ್ಕೆ ಅಮಿತ್‌ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ!

2 Mins Read
Recent News

ರೆಕಾರ್ಡ್ ಲಾಭ ಗಳಿಸಿದರೂ ಉದ್ಯೋಗಿಗಳಿಗೆ ಗೇಟ್ ಪಾಸ್! 1,100 ಮಂದಿಯನ್ನು ಮನೆಗೆ ಕಳುಹಿಸಿದ ಕ್ಲೌಡ್‌ಫ್ಲೇರ್ | Cloudflare layoffs

ತೂಕ ಇಳಿಕೆಗೆ ಮತ್ತು ಜೀರ್ಣಕ್ರಿಯೆಗೆ ‘ಸೋರೆಕಾಯಿ’ ರಾಮಬಾಣ: ಈ ತರಕಾರಿಯ ಅದ್ಭುತ ಪ್ರಯೋಜನಗಳಿವು!

BIG BREAKING: ನಾಳೆ ಮಧ್ಯಾಹ್ನ 3.15ಕ್ಕೆ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ | TVK Chief Vijay

ಡೆನ್ವರ್ ಏರ್‌ಪೋರ್ಟ್‌ನಲ್ಲಿ ಘೋರ ದುರಂತ: ಟೇಕ್ ಆಫ್ ಆಗುವ ವೇಳೆ ವಿಮಾನಕ್ಕೆ ಸಿಲುಕಿ ಪಾದಚಾರಿ ಸಾವು!

State News
KARNATAKA

ಸಾಲುಮರದ ತಿಮ್ಮಕ್ಕ ಸ್ಮಾರಕಕ್ಕೆ ಡಿಪಿಆರ್ ಸಿದ್ಧ: 25 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ- ಸಚಿವ ಈಶ್ವರ್ ಖಂಡ್ರೆ

By kannadanewsnow09 KARNATAKA 1 Min Read

ಬೇಲೂರು: ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಪ್ರಕೃತಿ ಪರಿಸರದ ಮೇಲೆ ಪ್ರೀತಿ ಹೊಂದಿದ್ದರು. ಅವರ ಹೆಸರಲ್ಲಿ 25…

BREAKING : ಚಿಕ್ಕಬಳ್ಳಾಪುರದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ | Video Viral

BIG NEWS : ‘ಯಡಿಯೂರಪ್ಪ ಅಭಿಮಾನೋತ್ಸವ’ಕ್ಕೆ ಅಮಿತ್‌ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ!

ಈ ತಿಂಗಳ ಕೊನೆಯಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಸಮಸ್ಯೆ ಬಗೆಹರಿಯಲಿದೆ : ಕೆ.ಎಚ್ ಮುನಿಯಪ್ಪ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.