ಮೈಸೂರು: ನಗರದ ಹೋಟೆಲ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಂತರರಾಷ್ಟ್ರೀಯ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಈ ದಾಳಿಯ ವೇಳೆ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, 7 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮೈಸೂರಿನ ಬೋಗಾದಿ ಬಳಿಯ ಹೋಟೆಲ್ ನಲ್ಲಿ ಅಂತರಾಷ್ಟ್ರೀಯ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಕೆ ಎಸ್ ಆರ್ ಟಿಸಿ ನೌಕರನಾಗಿದ್ದಂತ ರತನ್ ಎಂಬಾತ ಥೈಲ್ಯಾಂಡ್ ಬ್ಯೂಟಿ ಇಟ್ಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವಂತ ಮಾಹಿತಿಯನ್ನು ಒಡನಾಡಿ ಸೇವಾ ಸಂಸ್ಥೆ ಪೊಲೀಸರಿಗೆ ಮುಟ್ಟಿಸಿತ್ತು.
ಈ ಹಿನ್ನಲೆಯಲ್ಲಿ ಒಡನಾಡಿ ಸೇವಾ ಸಂಸ್ಥೆ ಹಾಗೂ ಪೊಲೀಸರು ಬೋಗಾದಿ ಬಳಿಯ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಥೈಲ್ಯಾಂಡ್ ಬ್ಯೂಟಿ ಬಳಸಿ ಓರ್ವ ಗಿರಾಕಿಯಿಂದ 8 ರಿಂದ 10 ಸಾವಿರ ವಸೂಲಿ ಮಾಡುತ್ತಿದ್ದಂತ ಜಾಲವನ್ನು ಪತ್ತೆ ಹಚ್ಚಿ, ಜೈಲಿಗಟ್ಟಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸುಡಾನ್ ನಲ್ಲಿ ಆಸ್ಪತ್ರೆ ಮೇಲೆ ದಾಳಿ: 70 ಮಂದಿ ಸಾವು | Attack on Hospital
BREAKING : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಯ ದಿನಾಂಕ ಬದಲಾವಣೆ : ಫೆ.15ರ ಬದಲು 17ಕ್ಕೆ ಫಿಕ್ಸ್