ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಾರುಕಟ್ಟೆಯಲ್ಲಿ ಹಲವು ಬಗೆಯ ಅಕ್ಕಿಗಳು ಲಭ್ಯವಿವೆ. ಒಂದು ಕಿಲೋ ಅಕ್ಕಿಯ ಬೆಲೆ 50 ರಿಂದ 200 ಇರ್ಬೋದು ಅಲ್ವಾ. ಆದ್ರೆ, ಈ ಅಕ್ಕಿಯ ಬೆಲೆ ಬರೋಬ್ಬರಿ 15 ಸಾವಿರ ರೂಪಾಯಿ. ನಂಬುವುದಕ್ಕೆ ಆಗ್ತಿಲ್ಲ.? ಆದ್ರು ಇದು ಸತ್ಯ. ಹಾಗಿದ್ರೆ, ಈ ಅಕ್ಕಿ ಹೆಸರೇನು.? ಎಲ್ಲಿ ಬೆಳೆಯಲಾಗುತ್ತೆ.? ಏನಿದರ ವಿಶೇಷತೆ ಅನ್ನೋದನ್ನ ತಿಳಿಯೋಣ ಬನ್ನಿ.
ಜಪಾನೀಸ್ ಕಿನ್ಮೆಮೈ ರೈಸ್.. ಈ ಅಕ್ಕಿಯನ್ನು ಜಪಾನ್’ನಲ್ಲಿ ಬೆಳೆಯಲಾಗುತ್ತದೆ. ಅತ್ಯಂತ ದುಬಾರಿ ಅಕ್ಕಿ ಅನ್ನೋ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದೆ. ಜಪಾನ್’ನ ಟೊಯೊ ರೈಸ್ ಕಾರ್ಪೊರೇಷನ್ 5 ವಿಶೇಷ ಭತ್ತವನ್ನ ಬೆಳೆಯುತ್ತದೆ. ಅದರಲ್ಲಿ ಕಿನ್ಮೆಮ್ ಅಕ್ಕಿ ಕೂಡ ಒಂದು. ಇದನ್ನು ಪ್ರೀಮಿಯಂ ಅಕ್ಕಿ ಎಂದೂ ಕರೆಯುತ್ತಾರೆ. ಈ ಸಂಸ್ಥೆಯನ್ನ 1961ರಲ್ಲಿ ಸ್ಥಾಪಿಸಲಾಯಿತು.
ಕಿನ್ಮೆಮೈ ಅಕ್ಕಿಯ ವಿಶೇಷತೆಗಳು : ಈ ಅಕ್ಕಿ ಬ್ರೈನ್ ರೈಸ್ಗಿಂತ ಹಗುರವಾಗಿದ್ದು, ತುಂಬಾ ಚಿಕ್ಕದಾಗಿರುತ್ತವೆ. ಈ ಅಕ್ಕಿಯ ವಿಶೇಷವೆಂದರೆ ಇದನ್ನು ಬೇಯಿಸುವ ಮೊದಲು ತೊಳೆಯುವ ಅಗತ್ಯವಿಲ್ಲ, ಇದನ್ನು ಕಡಿಮೆ ಸಮಯದಲ್ಲಿ ಬೇಯಿಸಬಹುದು.
ಇತರ ವಿಧದ ಅಕ್ಕಿಗಳಿಗೆ ಹೋಲಿಸಿದ್ರೆ, ಕಿನ್ಮೆಮೈ ಅಕ್ಕಿ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನ ಹೊಂದಿದೆ. ರುಚಿ ಅದ್ಭುತ.. ತಿಂದ ತಕ್ಷಣ ಜೀರ್ಣವಾಗುವುದು ಮಾತ್ರವಲ್ಲದೆ ಹೆಚ್ಚಿನ ಶಕ್ತಿಯನ್ನ ನೀಡುತ್ತದೆ. ಇವು ಬಿಳಿ ಮತ್ತು ಕಂದು ಬಣ್ಣದಲ್ಲಿ ದೊರೆಯುತ್ತವೆ.
ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಅವು 1.8 ಪಟ್ಟು ಹೆಚ್ಚು ಫೈಬರ್ ಮತ್ತು 7 ಪಟ್ಟು ಹೆಚ್ಚು ವಿಟಮಿನ್ ಬಿ 1 ಹೊಂದಿರುತ್ತವೆ. ಇದು ಆರು ಪಟ್ಟು ಹೆಚ್ಚು ಲಿಪೊಪೊಲಿಸ್ಯಾಕರೈಡ್’ಗಳನ್ನ ಹೊಂದಿರುತ್ತದೆ. ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಈ ಅಕ್ಕಿ ಸಹಾಯ ಮಾಡುತ್ತದೆ.
ಚೀನಾದಲ್ಲಿ ‘ಹಿಟ್ ಅಂಡ್ ರನ್’ಗೆ 35 ಜನರು ಬಲಿ: ಶಂಕಿತ ಆರೋಪಿ ಅರೆಸ್ಟ್ | China Car Hit and Run Case
ಉಪ ಚುನಾವಣೆ ವೇಳೆಯಲ್ಲೇ ಗೃಹಲಕ್ಷ್ಮೀ ಹಣ ಬಿಡುಗಡೆ ನೀತಿ ಸಂಹಿತೆ ಉಲ್ಲಂಘನೆ: ಬೊಮ್ಮಾಯಿ ಗಂಭೀರ ಆರೋಪ
BREAKING : ‘ಗೇಟ್’ ಪರೀಕ್ಷಾ ದಿನಾಂಕ ಪರಿಷ್ಕರಣೆ, ಹೊಸ ದಿನಾಂಕ ಹೀಗಿದೆ.! GATE 2025