ಬೆಂಗಳೂರು : ಅಂಧರ ಅನುಕೂಲಕ್ಕಾಗಿ ಬಿಎಂಟಿಸಿಯ 125 ಬಸ್ಗಳಲ್ಲಿ ಆನ್ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಆಗಸ್ಟ್ ಅಂತ್ಯದ ಒಳಗೆ 500 ಬಸ್ಗಳಲ್ಲಿ, ಅನಂತರ ಎಲ್ಲ ಬಸ್ಗಳಲ್ಲಿ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಅಂಧರ ಅನುಕೂಲಕ್ಕಾಗಿ ಬಿಎಂಟಿಸಿಯ 125 ಬಸ್ಗಳಲ್ಲಿ ಆನ್ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದೆ.ಆನ್ಬೋರ್ಡ್ ಸಾಧನವು ದೃಷ್ಟಿ ಸಮಸ್ಯೆಯ ವ್ಯಕ್ತಿಗಳಿಗೆ ಬಸ್ ಮಾರ್ಗ ಸಂಖ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವರು ಆ ಸಾಧನದಲ್ಲಿ ಸಂಖ್ಯೆ ಒತ್ತಿದಾಗ ಬಸ್ನಲ್ಲಿ ಅಳವಡಿಸಿದ್ದ ಮೌಂಟೆಡ್ ಸ್ಪೀಕರ್ ಧ್ವನಿ ಹೊರಡಿಸುತ್ತದೆ.
ಇದು ಬಸ್ನ ಚಾಲಕ ಮತ್ತು ನಿರ್ವಾಹಕರಿಗೂ ಮಾಹಿತಿ ನೀಡುವುದರಿಂದ ಅವರನ್ನು ಬಸ್ ಹತ್ತಿಸಲು ಸಹಾಯ ಮಾಡುತ್ತಾರೆ. ಅಲ್ಲದೇ ಇದೇ ಧ್ವನಿಯ ಆಧಾರದಲ್ಲಿ ಆ ವ್ಯಕ್ತಿಗಳು ಕೂಡ ಬಸ್ನ ಬಾಗಿಲಿನತ್ತ ಬರಲು ಉಪಯೋಗವಾಗುತ್ತದೆ. ಇಳಿಯಬೇಕಾದ ಸ್ಥಳದಲ್ಲಿಯೂ ಬಟನ್ ಒತ್ತಿದರೆ ಅವರನ್ನು ಸುರಕ್ಷಿತವಾಗಿ ಇಳಿಸಲು ಅನುಕೂಲ.