ಬೆಂಗಳೂರು: ರಾಜ್ಯದಲ್ಲಿನ ಆಸ್ಪತ್ರೆ ಕಟ್ಟಡಗಳು, ಕ್ಲಿನಿಕ್ ಗಳಲ್ಲಿ ಕನಿಷ್ಠ ಅಗ್ನಿಶಮನ ಉಪಕರಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಖಡಕ್ ಆದೇಶ ಮಾಡಿದೆ.
ಈ ಕುರಿತಂತೆ ಪೊಲೀಸ್ ಸಹಾಯಕ ಸೇವೆಗಳು ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನಡವಳಿಯನ್ನು ಹೊರಡಿಸಿದ್ದು, ದಿನಾಂಕ: 07-11-2025 ರ ಪತ್ರದಲ್ಲಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಬೆಂಗಳೂರು, ಇವರು ಆಸ್ಪತ್ರೆ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಿಸಿಎಎಸ್), ಒಳಾಡಳಿತ ಇಲಾಖೆರವರ ಅಧ್ಯಕ್ಷತೆಯಲ್ಲಿ ದಿನಾಂಕ: 20-09-2025 ರಂದು ನಡೆದ ಸಭೆಯ ನಡವಳಿಯ ಕ್ರ.ಸಂ.(1) ರಲ್ಲಿ ಬಹುಮಹಡಿ ಕಟ್ಟಡ ವ್ಯಾಪ್ತಿಗೆ ಸೇರದ (20.99 ಮೀ ಒಳಗಿನ ಕಟ್ಟಡ) ಆಸ್ಪತ್ರೆ ಕಟ್ಟಡಗಳಿಗೆ ಕನಿಷ್ಠ ಅಗ್ನಿಶಮನ ಉಪಕರಣಗಳ ಪಟ್ಟಿ ತಯಾರಿಸುವಂತೆ ಇಲಾಖೆಗೆ ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಅದರಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಕೋರಿಕೆಯ ಮೇರೆಗೆ ಕಟ್ಟಡದ ಎತ್ತರ ಹಾಗೂ ಒಟ್ಟು ವಿಸ್ತೀರ್ಣಕ್ಕೆ ಅನುಗುಣವಾಗಿ ರಾಷ್ಟ್ರೀಯ ಕಟ್ಟಡ ಸಂಹಿತೆ ಹಾಗೂ ಚಾಲ್ತಿಯಲ್ಲಿರುವ ನಿಯಮಗಳ ಪರಿಮಿತಿಯೊಳಗೆ ಬಹುಮಹಡಿ ಕಟ್ಟಡದ ವ್ಯಾಪ್ತಿಗೆ ಸೇರದ (20.99 ಮೀಒಳಗಿನ ಕಟ್ಟಡ) ಆಸ್ಪತ್ರೆ ಕಟ್ಟಡಗಳಿಗೆ ಕೈಗೊಳ್ಳಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಕನಿಷ್ಠ ಶಿಫಾರಸ್ಸುಗಳನ್ನು ಅನುಬಂಧದಂತೆ ಅಳವಡಿಸಿಕೊಳ್ಳಬಹುದೆಂದು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಇವರ ಪುಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಟ್ಟಡದ ಎತ್ತರ ಹಾಗೂ ಒಟ್ಟು ವಿಸ್ತೀರ್ಣಕ್ಕೆ ಅನುಗುಣವಾಗಿ ರಾಷ್ಟ್ರೀಯ ಕಟ್ಟಡ ಸಂಹಿತೆ ಹಾಗೂ ಚಾಲ್ತಿಯಲ್ಲಿರುವ ನಿಯಮಗಳ ಪರಿಮಿತಿಯೊಳಗೆ ಬಹುಮಹಡಿ ಕಟ್ಟಡ ವ್ಯಾಪ್ತಿಗೆ ಸೇರದ (20.99 ಮೀ ಒಳಗಿನ ಕಟ್ಟಡ) ಆಸ್ಪತ್ರೆ ಕಟ್ಟಡಗಳಿಗೆ ಕನಿಷ್ಠ ಅಗ್ನಿಶಮನ ಅನುಬಂಧದಲ್ಲಿರುವಂತೆ ಅಳವಡಿಸಿಕೊಳ್ಳಲು ಅಗ್ನಿಶಾಮಕ ಉಪಕರಣಗಳನ್ನು ತುರ್ತು ಸೇವೆಗಳ ಮತ್ತು ಇಲಾಖೆಯು ಅಗ್ನಿ ಸಲಹಾ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿದ್ದಾರೆ.
ಮುಂದುವರೆದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಆಸ್ಪತ್ರೆ/ಕ್ಲಿನಿಕ್‌ಗಳು ಈ ಕೆಳಕಂಡ ಅಂಶಗಳನ್ನು ಪಾಲಿಸತಕ್ಕದ್ದು:-
1. ಅಗ್ನಿ ಶಮನ ಮುನ್ನೆಚ್ಚರಿಕಾ ಕ್ರಮಗಳನ್ನು ಆಸ್ಪತ್ರೆ ಕಟ್ಟಡಗಳು/ಕ್ಲಿನಿಕ್‌ಗಳು ಅಳವಡಿಸಿಕೊಂಡಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಟ್ಟದಲ್ಲಿ ಪರಿಶೀಲಿಸತಕ್ಕದ್ದು. ಈ ಕುರಿತಂತೆ ಇನ್ನಿತರೆ ಯಾವುದೇ ಸಲಹೆ ಸೂಚನೆಗಳು ವೈದ್ಯಕೀಯ ಸಂಸ್ಥೆಗಳಿಗೆ ಅಗತ್ಯವಿದ್ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗ್ನಿಶಾಮಕ ಇಲಾಖೆಯನ್ನು ಸಂಪರ್ಕಿಸತಕ್ಕದ್ದು.
2. ಅನುಬಂಧದಲ್ಲಿರುವ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಯಾವುದೇ ಸಮಯದಲ್ಲಿ ಅಗ್ನಿಶಾಮಕ ಇಲಾಖೆಯ ಪರಿಶೀಲನೆಗೆ ಒಳಪಟ್ಟಿರುತ್ತವೆ.
ವಸಂತ ಬಿ ಈಶ್ವರಗೆರೆ… ಸಂಪಾದಕರು…


BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
BREAKING: 2025ನೇ ಸಾಲಿನ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ವಾರ್ಷಿಕ, ದತ್ತಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ








