ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವ್ಯಕ್ತಿಯೊಬ್ಬರು ರಾಮಾಯಣದ ಬೋಧನೆಗಳಿಂದ ಪ್ರೇರಿತರಾಗಿ ಪರಿವರ್ತನೆಯಾಗಿದ್ದಾರೆ. ಒಂದೊಮ್ಮೆ ಪೊಲೀಸರಿಂದ ಕಾಲಿಗೆ ಗುಂಡು ಹಾರಿಸಲ್ಪಟ್ಟ ರೌನಕ್ ಗುರ್ಜರ್. ಇಂದು ತನ್ನ ತೊಡೆಯ ಚರ್ಮದ ಭಾಗವನ್ನ ಬಳಸಿಕೊಂಡು ಪಾದರಕ್ಷೆಗಳನ್ನ ತಯಾರಿಸಿ ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದಾನೆ. ಭಗವಂತ ರಾಮನ ತನ್ನ ತಾಯಿಯ ಮೇಲಿನ ಭಕ್ತಿಯ ಕಥೆಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಆತ ಹೇಳಿದ್ದಾನೆ.
“ನಾನು ನಿಯಮಿತವಾಗಿ ರಾಮಾಯಣವನ್ನು ಪಠಿಸುತ್ತೇನೆ, ಮತ್ತು ಭಗವಾನ್ ರಾಮನ ಪಾತ್ರದಿಂದ ನಾನು ಆಳವಾಗಿ ಪ್ರಭಾವಿತನಾಗಿದ್ದೇನೆ” ಎಂದು ರೌನಕ್ ಹಂಚಿಕೊಂಡಿದ್ದಾರೆ.
“ಒಬ್ಬರು ತಮ್ಮ ಸ್ವಂತ ಚರ್ಮದಿಂದ ಚಪ್ಪಲಿಗಳನ್ನ ತಯಾರಿಸಿ ತಾಯಿಗೆ ಕೊಟ್ಟರೂ ಅದು ಸಾಕಾಗುವುದಿಲ್ಲ ಎಂದು ಭಗವಂತ ರಾಮನೇ ಹೇಳಿದ್ದಾರೆ. ಆದ್ದರಿಂದ, ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು, ಮತ್ತು ನಾನು ನನ್ನ ಚರ್ಮದಿಂದ ಪಾದರಕ್ಷೆಗಳನ್ನ ತಯಾರಿಸಿ ನನ್ನ ತಾಯಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ” ಎಂದು ರೌನಕ್ ಹೇಳಿದ್ದಾರೆ.
ಅವರು ತಮ್ಮ ಕುಟುಂಬದಲ್ಲಿ ಯಾರಿಗೂ ತಿಳಿಸದೆ ಆಸ್ಪತ್ರೆಯಲ್ಲಿ ಅವರ ಚರ್ಮವನ್ನ ಶಸ್ತ್ರಚಿಕಿತ್ಸೆಯಿಂದ ತೆಗೆದು ನಂತರ ಅದನ್ನು ಪಾದರಕ್ಷೆಗಳನ್ನು ತಯಾರಿಸುವ ಚಮ್ಮಾರರ ಬಳಿಗೆ ತೆಗೆದುಕೊಂಡು ಹೋಗಿ ಚಪ್ಪಲಿಯನ್ನ ತಯಾರಿಸಿರುವುದಾಗಿ ಹೇಳಿದ್ದಾರೆ.
ಮಾರ್ಚ್ 14 ಮತ್ತು 21 ರ ನಡುವೆ ತನ್ನ ಮನೆಯ ಬಳಿ ಆಯೋಜಿಸಿದ್ದ ಭಗವತ್ ಕಥೆಯ ಸಮಯದಲ್ಲಿ ರೌನಕ್ ತನ್ನ ತಾಯಿಗೆ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಿದರು.
BREAKING : ಕೇಂದ್ರ ಸರ್ಕಾರಕ್ಕೆ ‘ಚುನಾವಣಾ ಆಯೋಗ’ ಶಾಕ್ ; ‘ವಿಕಸಿತ ಭಾರತ ವಾಟ್ಸಾಪ್ ಸಂದೇಶ’ ಕಳುಹಿಸದಂತೆ ತಾಕೀತು
ಬೆಂಗಳೂರು : ಮದ್ಯ ಸೇವನೆಗೆ ಹಣ ಕೊಟ್ಟಿಲ್ಲವೆಂದು ಹೆಂಡತಿ, ಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಭೂಪ!
“ಗೊಂದಲ ಸೃಷ್ಟಿಯಾಗುತ್ತೆ” : ‘ಚುನಾವಣಾ ಆಯುಕ್ತರ ನೇಮಕಾತಿ’ ಕಾನೂನು ತಡೆಗೆ ‘ಸುಪ್ರೀಂಕೋರ್ಟ್’ ನಕಾರ