ನವದೆಹಲಿ: ಮೇ 8 ರ ಗುರುವಾರ ಸಂಜೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಸೇರಿದಂತೆ ಪಾಕಿಸ್ತಾನದ ಭಾರತದ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡ ನಂತರ, ಭಾರತೀಯ ನೌಕಾಪಡೆಯೂ ಕ್ರಮ ಕೈಗೊಂಡಿದೆ. ಈಗ ಐಎನ್ಎಸ್ ವಿಕ್ರಾಂತ್ ಕರಾಚಿ ಬಂದರಿ ಮೇಲೆ ದಾಳಿ ಮಾಡಿದೆ.
ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಐಎನ್ಎಸ್ ವಿಕ್ರಾಂತ್ ಕರಾಚಿಯನ್ನು ಗುರಿಯಾಗಿಸಿಕೊಂಡು ಭಾರಿ ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದೆ. ನೌಕಾ ದಾಳಿಯು ಕರಾಚಿ ಬಂದರು ಸೇರಿದಂತೆ ನಗರದಾದ್ಯಂತ ದೊಡ್ಡ ಬೆಂಕಿಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಟಿವಿ ವರದಿ ತಿಳಿಸಿದೆ.