Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸತ್ತ ಮಗಳಿಗಿಂತ, ವಿಚ್ಛೇದನ ಪಡೆದ ಮಗಳೇ ಮೇಲು!’ :ಸುಪ್ರೀಂ ಕೋರ್ಟ್‌ನಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಸರ್ಕಾರದ ಆಕ್ರೋಶ!

​’ಡಾನ್ 3′ ವಿವಾದ: ನಟ ರಣವೀರ್ ಸಿಂಗ್‌ಗೆ ಚಿತ್ರರಂಗದಿಂದ ನಿಷೇಧ; ಸಹಕರಿಸದಂತೆ ಕಾರ್ಮಿಕರ ಮಂಡಳಿ ಕಟ್ಟುನಿಟ್ಟಿನ ಆದೇಶ!

BIG NEWS: ರಾಜ್ಯದಲ್ಲಿ 2015ರ ನಂತ್ರ ‘ಅರಣ್ಯಭೂಮಿ ಒತ್ತುವರಿ’ ಮಾಡಿದ ರೈತರಿಗೆ ಶಾಕ್: ತೆರವಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ: ಅರಿಶಿಣ, ಕುಂಕುಮ ವಿತರಿಸಿ ಮತದಾನ ಜಾಗೃತಿ!
KARNATAKA

ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ: ಅರಿಶಿಣ, ಕುಂಕುಮ ವಿತರಿಸಿ ಮತದಾನ ಜಾಗೃತಿ!

By ಅವಿನಾಶ್‌ ಆರ್‌ ಭೀಮಸಂದ್ರ

ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಈಗಾಗಲೇ ಭರದ ಸಿದ್ಧತೆ ನಡೆಸಿದ್ದು, ಕಳೆದ ಸಲಕ್ಕಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಹಲವು ವಿನೂತನ ಕಾರ್ಯ ಚಟುವಟಿಕೆಗಳನ್ನು ರೂಪಿಸಿದೆ.

ಕಳೆದ ಲೋಕಸಭೆ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ಬಳ್ಳಾರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ.

ಜಿಲ್ಲಾ ಸ್ವೀಪ್ ಸಮಿತಿಯು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅನೇಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಮುಖವಾಗಿ ವಾಕ್‍ಥಾನ್, ಸಹಿ ಸಂಗ್ರಹ ಅಭಿಯಾನ, ಸೈಕಲ್ ಜಾಥಾ, ಪಂಜಿನ ಮೆರವಣಿಗೆ, ‘ನಮ್ಮ ನಡೆ ಮತಗಟ್ಟೆ ಕಡೆ’, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಶಾಲೆ, ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೆÇೀಷಕರಿಗೆ ‘ಪತ್ರ ಚಳವಳಿ’, ಎತ್ತಿನ ಬಂಡಿಗಳ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

ಅರಿಸಿನ– ಕುಂಕುಮದ ಕರೆಯೋಲೆ: ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಗೆ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ‘ಅರಿಸಿನ– ಕುಂಕುಮ ಹಾಗೂ ಕರೆಯೋಲೆ’ ನೀಡಿ ಮತದಾನಕ್ಕೆ ಆಹ್ವಾನಿಸಲಾಗುತ್ತಿದೆ. ಮೇ 07 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕೋರಲಾಗುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಕುಡತಿನಿ ವಲಯದ ಬೆಳಗಲ್ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕುಂಕುಮ ಹಚ್ಚಿ ಮತದಾನಕ್ಕೆ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿ ಕಂಡುಬಂತು. ಕುಡತಿನಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಸುಮಂಗಳಮ್ಮ ಅವರು ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ-ಕುಂಕುಮ ವಿತರಣೆ ಮಾಡುವ ಮೂಲಕ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.

Innovative campaign to increase voting: Turmeric and kumkum distributed to create voter awareness!
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದಲ್ಲಿ 2015ರ ನಂತ್ರ ‘ಅರಣ್ಯಭೂಮಿ ಒತ್ತುವರಿ’ ಮಾಡಿದ ರೈತರಿಗೆ ಶಾಕ್: ತೆರವಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

2 Mins Read

ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಿತಿಗೆ ವಿವಿಧ ವಿಭಾಗಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

2 Mins Read

BIG NEWS : ಪಡಿತರ ಅಕ್ಕಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ : ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ!

2 Mins Read
Recent News

‘ಸತ್ತ ಮಗಳಿಗಿಂತ, ವಿಚ್ಛೇದನ ಪಡೆದ ಮಗಳೇ ಮೇಲು!’ :ಸುಪ್ರೀಂ ಕೋರ್ಟ್‌ನಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಸರ್ಕಾರದ ಆಕ್ರೋಶ!

​’ಡಾನ್ 3′ ವಿವಾದ: ನಟ ರಣವೀರ್ ಸಿಂಗ್‌ಗೆ ಚಿತ್ರರಂಗದಿಂದ ನಿಷೇಧ; ಸಹಕರಿಸದಂತೆ ಕಾರ್ಮಿಕರ ಮಂಡಳಿ ಕಟ್ಟುನಿಟ್ಟಿನ ಆದೇಶ!

BIG NEWS: ರಾಜ್ಯದಲ್ಲಿ 2015ರ ನಂತ್ರ ‘ಅರಣ್ಯಭೂಮಿ ಒತ್ತುವರಿ’ ಮಾಡಿದ ರೈತರಿಗೆ ಶಾಕ್: ತೆರವಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

​‘ಕಾಕ್ರಾಚ್ ಜನತಾ ಪಾರ್ಟಿ’ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ: ‘ಪ್ರತಿಯೊಂದನ್ನೂ ಇಷ್ಟೊಂದು ಸೆಂಟಿಮೆಂಟಲ್ ಆಗಿ ತೆಗೆದುಕೊಳ್ಳಬೇಡಿ’ ಎಂದ ನ್ಯಾಯಾಲಯ!

State News
KARNATAKA

BIG NEWS: ರಾಜ್ಯದಲ್ಲಿ 2015ರ ನಂತ್ರ ‘ಅರಣ್ಯಭೂಮಿ ಒತ್ತುವರಿ’ ಮಾಡಿದ ರೈತರಿಗೆ ಶಾಕ್: ತೆರವಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಉಡುಪಿ : ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿಯ ವಿಚಾರದಲ್ಲಿ ಶೂನ್ಯ ಸಹಿಷ್ಣತೆ ತಳೆದಿದ್ದು, ಹೊಸ ಒತ್ತುವರಿಗೆ ಅವಕಾಶ ನೀಡಬಾರದು…

ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಿತಿಗೆ ವಿವಿಧ ವಿಭಾಗಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

BIG NEWS : ಪಡಿತರ ಅಕ್ಕಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ : ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ!

ಇದು ಹನುಮಂತ ಮತ್ತು ಶನಿದೇವರ ಕತೆ; ತಪ್ಪದೇ ಓದಿ, ನಿಮಗೆ ಧೈರ್ಯ, ರಕ್ಷಣೆ ಮತ್ತು ಮನಶಾಂತಿ ಗ್ಯಾರಂಟಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.