ಉತ್ತರ ಕನ್ನಡ: ರಾಜ್ಯದಲ್ಲಿ ಯುಪಿ ಮಾದರಿಯಲ್ಲೇ ಅಮಾನವೀಯ ಎನ್ನುವಂತೆ ಮತ್ತೊಂದು ಘಟನೆಯೊಂದು ನಡೆದಿದೆ. ಅದೇ ಉತ್ತರ ಕನ್ನಡದಲ್ಲಿ ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಹರಿದು ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನಡುರಸ್ತೆಯಲ್ಲೇ ಮಹಿಳೊಬ್ಬರ ಬಟ್ಟೆಯನ್ನು ಹರಿದಿರುವಂತ ನಾಲ್ವರು ಮಹಿಳೆಯರು, ಆಕೆಯ ಮೇಲೆ ಹಲ್ಲೆ ಮಾಡಿರೋ ಘಟನೆ ನಡೆದಿದೆ.
ಫೆಬ್ರವರಿ.5ರಂದು ಈ ಘಟನೆ ನಡೆದಿದ್ದು, ಹರಿದ ಬಟ್ಟೆಯಲ್ಲೇ ಅಂಕೋಲ ಬಸ್ ನಿಲ್ದಾಣದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಗೆ ಹಲ್ಲೆಗೆ ಒಳಗಾಗಿದ್ದಂತ ರಾಜೇಶ್ವರಿ ತೆರಳಿ ದೂರು ದಾಖಲಿಸೋದಕ್ಕೆ ಕೋರಿದರು, ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳೋದಕ್ಕೆ ಹಿಂದೇಟು ಹಾಕಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಫೆ.5ರಂದು ನಡೆದಿದ್ದಂತ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಂತೆ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
BREAKING: ವಿಧಾನಪರಿಷತ್ತಿನಲ್ಲಿ ‘APMC ತಿದ್ದುಪಡಿ ವಿಧೇಯಕ’ ಅಂಗೀಕಾರ
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ