ಬೆಂಗಳೂರು: ರೈಲಿಗೆ ಸಿಲುಕಿ ಕುರಿಗಾಯಿಯೊಬ್ಬರ 46 ಕುರಿಗಳು ಧಾರುಣವಾಗಿ ಸಾವನ್ನಪ್ಪಿದ್ದವು. ಆ ದುಃಖದ ನಡುವೆಯೂ ಸತ್ತ ಕುರಿಗಳನ್ನೇ ಬಂದಷ್ಟು ದುಡ್ಡು ಬರಲಿ ಅಂತ ಮಾರುತ್ತಿದ್ದ ರೈತನಲ್ಲೇ ರೈಲ್ವೆ ಸಿಬ್ಬಂದಿಯೊಬ್ಬರು ಪಾಲು ಕೇಳಿರುವಂತ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರೈತ ದೇವರಾಜ್ ಕುರಿಗಳನ್ನು ರೈಲ್ವೆ ಹಳಿಯ ಮೇಲಿನಿಂದ ಮತ್ತೊಂದು ಬದಿಗೆ ಹೊಡೆಯುತ್ತಿದ್ದಾಗ ರೈಲು ಹರಿದು 46 ಕುರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಬಳಿಯಲ್ಲಿ ಸಾವನ್ನಪ್ಪಿದ್ದವು. ಧಾರುಣವಾಗಿ ರೈಲಿಗೆ ಸಿಲುಕಿ ಸಾವನ್ನಪ್ಪಿದಂತ 46 ಕುರಿಗಳನ್ನು ದುಃಖದ ನಡುವೆಯೂ ಅರ್ಧ ಬೆಲೆಗೆ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು.
ದಬಾಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಂತ ಕುರಿಗಳನ್ನು ಅರ್ಧ ಬೆಲೆಗೆ ಮಾರುತ್ತಿದ್ದಂತ ಕುರಿಗಾಯಿ ದೇವರಾಜ್ ಬಳಿಯಲ್ಲಿ ತಮಗೆ 5 ಕುರಿಯನ್ನು ಉಚಿತವಾಗಿ ನೀಡುವಂತೆ ರೈಲ್ವೆ ಸಿಬ್ಬಂದಿ ವೆಂಕಟೇಶ್ ಎಂಬಾತ ಧಮ್ಕಿ ಹಾಕಿದ್ದಾರೆ. ಅಲ್ಲ ಸ್ವಾಮಿ ರೈಲು ಹರಿದು ಕುರಿ ಸಾವನ್ನಪ್ಪಿದ್ದಾವೆ. ಹೀಗಿರುವಾಗ ನೀವು ಪಾಲು ಕೇಳುತ್ತಿದ್ದೀರಲ್ಲ ಅಂತ ಅಲವತ್ತುಕೊಂಡಿದ್ದಾನೆ.
ಕುರಿಗಾಯಿ ದೇವರಾಜ್ ಅವರಿಂದ ರೈಲ್ವೆ ಸಿಬ್ಬಂದಿ ವೆಂಕಟೇಶ್ ಎಂಬಾತ ಧಮ್ಕಿ ಹಾಕಿ 5 ಕುರಿ ಉಚಿತವಾಗಿ ಕೊಡುವಂತೆ ಕೇಳಿದಂತ ವಿಷಯ ತಿಳಿದಂತ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅವರ ಮೇಲೆ ಹರಿಹಾಯ್ದಿದ್ದಾರೆ. ಈ ಘಟನೆ ದಬಾಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ: BJP ಅರುಣ್ ಶಹಾಪೂರ ಆಕ್ಷೇಪ
ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’