ಚಿಕ್ಕಬಳ್ಳಾಪುರ: ಜಿಲ್ಲೆಯ ಫಾರ್ಮ್ ಹೌಸ್ ಒಂದರಲ್ಲಿನ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿತ್ತು. ಈ ಜ್ವರದಿಂದಾಗಿ 100ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದವು. ಇಂತಹ ರೋಗಗ್ರಸ್ತ ಹಂದಿಗಳನ್ನು ಕೆರೆಗೆ ಬಿಸಾಡಿ ಅಮಾನವೀಯ ಕೃತ್ಯವನ್ನು ಎಸಗಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಬಳಿಯ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಎಸೆದು ಅಮಾನವೀಯ ಕೃತ್ಯವನ್ನು ಎಸಗಲಾಗಿದೆ. ಹೆಬ್ಬರಿ ಬಳಿಯಿರುವಂತ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಮಾಲೀಕ ಬಿಸಾಡಿದ್ದಾರೆ.
ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದರಿಂದ 100 ಹಂದಿಗಳು ಮೃತಪಟ್ಟಿದ್ದವು. ಮೃತಪಟ್ಟ ಹಂದಿಗಳನ್ನು ಕೆರೆಗೆ ಬಿಸಾಕಿ ಮಾಲೀಕ ಅವಿವೇಕತನ ಮೆರೆದಿದ್ದಾನೆ. ಇದರಿಂದಾಗಿ ಜನ, ಜಾನುವಾರ ನೀರು ಬಳಸಿದ್ರೆ ಅಪಾಯ ಎದುರಾಗುವಂತ ಆತಂಕ ಉಂಟಾಗಿದೆ.
ಕೆರೆಯಲ್ಲಿ ಹಂದಿಗಳ ಶವ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಹೆಬ್ಬರಿ ಗ್ರಾಮದ ಕೆರೆ ಬಳಿಗೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಪಶುಸಂಗೋಪನೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತಂಕ ವ್ಯಕ್ತ ಪಡಿಸಿದ ಸಚಿವ ಎಂ.ಸಿ ಸುಧಾಕರ್
ಇನ್ನೂ ಈ ವಿಷಯ ತಿಳಿದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
2026ರ ಮೊದಲಾರ್ಧದ ವೇಳೆಗೆ ರಿಲಯನ್ಸ್ ‘ಜಿಯೋ IPO’ಗೆ ಕಾಲಿಡಲಿದೆ: ಮುಖೇಶ್ ಅಂಬಾನಿ | Jio IPO
ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ `ಡಿಜಿಟಲ್ ರೂಪದಲ್ಲಿ ಸಿಗಲಿವೆ ಭೂದಾಖಲೆ’ಗಳು.!