ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಒಂದು ಬಾರಿ ಗರ್ಭ ಧರಿಸಿದ ಮೇಲೆ ಆಕೆಗೆ ಆಗಾಗ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಚಿಕ್ಕ ಪುಟ್ಟ ಒಂದಲ್ಲ ಒಂದ ಆರೋಗ್ಯದ ತೊಂದರೆ ಕಾಡುವುದು ಸಹಜ. ಅದರಲ್ಲಿ ಒಂದು ಗರ್ಭದ ಸಮಯದಲ್ಲಿ ಯೋನಿಯಲ್ಲಿ ಕಾಣಿಸುವ ರಕ್ತ ಚುಕ್ಕೆಗಳು ಇದರ ಬಗ್ಗೆ ನಾವಿಂದು ಡಿಟೇಲ್ ಆಗಿ ತಿಳಿದುಕೊಳ್ಳೋಣ.
ಗರ್ಭಾವಸ್ಥೆಯಲ್ಲಿ ಯೋನಿಯಲ್ಲಾಗುವ ರಕ್ತಸ್ರಾವ ಅಥವಾ ರಕ್ತ ಚುಕ್ಕೆಗಳು ಕಂಡ ತಕ್ಷಣ ಭಯ ಬೀಳುತ್ತಾರೆ. ಇದು ಗರ್ಭಪಾತವಾಗಬಹುದು ಎಂದು ಭಾವಿಸಿಬಿಡುತ್ತಾರೆ ಹೆಚ್ಚು ಭಯ ಬೀಳಬೇಡಿ.
ಗರ್ಭಾವಸ್ಥೆಯಲ್ಲಿ ಯೋನಿಯಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯ ಎಂದು ವೈದ್ಯರು ಹೇಳುತ್ತಾರೆ. ಐದರಲ್ಲಿ ಒಬ್ಬರಿಗೆ ಹೀಗೆ ಆಗಾಗ ಆಗುತ್ತದೆ ಎಂದು ಹೇಳುತ್ತಾರೆ. ಇದು ಕಾಮನ್ ಸಮಸ್ಯೆಯಾದರೂ ಆದರೆ ನಿತ್ಯವೂ ಹೀಗೆ ಆಗುತ್ತಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಡಿ ಮಾಡಿ ಚೆಕ್‌ಅಪ್ ಮಾಡಿಸಿಕೊಳ್ಳಿ.
ರಕ್ತ ಚುಕ್ಕೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ವೈಟ್ ಬ್ಲಡ್ ಅಂದರೆ ಬಿಳಿ ಸೆರಗು ಕೂಡ ಕಾಣಿಸಿಕೊಳ್ಳುತ್ತದೆ. ಆದರೆ ರಕ್ತ ಸ್ರಾವ ಹೆಚ್ಚಾದರೆ ಅಂದರೆ ತಿಂಗಳಿಗೊಮ್ಮೆ ಮುಟ್ಟಾಗುವಂತೆ ರಕ್ತ ಸ್ರಾವ ಆಗುತ್ತಿದ್ದರೆ ಏನೋ ತೊಂದರೆ ಇದೆ ಎಂದು ತಿಳಿಯಿರಿ. ನಿರ್ಲಕ್ಷ್ಯ ಮಾಡದೇ ಕೂಡಲೇ ವೈದರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ.
ನಿಮ್ಮ ಯೋನಿಯಿಂದ ರಕ್ತಸ್ರಾವ ಯಾವಾಗ ಯಾವಾಗ ಆಗುತ್ತದೆ. ಎಷ್ಟು ಪ್ರಮಾಣದಲ್ಲಿ ಆಗುತ್ತದೆ. ಹಾಗು ಇದಕ್ಕೆ ನೀವು ಎಷ್ಟು ಪ್ಯಾಡ್‌ಗಳನ್ನು ಬಳಸುತ್ತಿದ್ದೀರಿ ಎಂದು ಗಮನಿಸುತ್ತಾ ಇರಿ. ಒಂದು ವೇಳೆ ಇದು ದಿನೇ ದಿನೇ ಜಾಸ್ತಿ ಆದರೆ ವೈದ್ಯರಿಗೆ ತಿಳಿಸಿ. ಇನ್ನು ರಕ್ತ ಚುಕ್ಕೆಯ ಬಣ್ಣ ಸಹ ಗಮನಿಸಿ ಡಾಕ್ಟರ್ ಬಳಿ ಹೋದಾಗ ಯಾವುದನ್ನೂ ಬಿಡದೇ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಅವರಿಗೆ ತಿಳಿಸಿ.
ಸಾಮಾನ್ಯವಾಗಿ ಆಗಾಗ ರಕ್ತ ಚುಕ್ಕೆ ಕಂಡರೆ ಪರವಾಗಿಲ್ಲ. ಬದಲಾಗಿ ತೀವ್ರವಾದ ರಕ್ತಸ್ರಾವ ಆದರೆ, ತಲೆ ಸುತ್ತು ಬಂದರೆ ಮತ್ತು ಸೊಂಟ ಹಾಗು ಹೊಟ್ಟೆ ನೋವು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಬಳಿ ಹೋಗಿ.
ಇನ್ನು ಗರ್ಭಾವಸ್ಥೆಯಲ್ಲಿ ರಕ್ತ ಚುಕ್ಕೆಗಳು ಅಥವಾ ರಕ್ತಸ್ರಾವ ಉಂಟಾಗಲು ಕಾರಣಗಳೇನೆಂದರೆ, ಉತ್ತಮ ಪೌಷ್ಟಿಕ ಆಹಾರಗಳನ್ನು ಸೇವಿಸದೇ ಇರುವುದು, ಗರ್ಭ ಕಂಠದಲ್ಲಿ ಸಮಸ್ಯೆ, ಉರಿಯೂತ, ನೋವು ಕಿರಿಕಿ ಹಾಗು ಅತಿಯಾದ ಲೈಂಗಿಕ ಕ್ರಿಯೆಯಿಂದ ಹೀಗೆ ಆಗುತ್ತದೆ. ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡಿದರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.