ಶಿವಮೊಗ್ಗ: ಜಿಲ್ಲೆಯ ಸಾಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ NAAC ಮೌಲ್ಯಮಾಪನದಲ್ಲಿ CGPA 2.8 B++ ಶ್ರೇಣಿ ಲಭ್ಯವಾಗಿದೆ ಎಂಬುದಾಗಿ ಪ್ರಾಂಶುಪಾಲೆ ಡಾ.ರಾಜೇಶ್ವರಿ ಅವರು ತಿಳಿಸಿದರು. ಅಲ್ಲದೇ ಇದಕ್ಕೆ ಕಾರಣರಾದಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಾಲೇಜು ಆರಂಭಗೊಂಡು 33 ವರ್ಷಗಳ ಸಾರ್ಥಕ ಶೈಕ್ಷಣಿಕ ಸೇವೆಯನ್ನು ಕಳೆದಿದೆ. 1991ರಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕಾಲೇಜು ಇಂದು 3000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುವಂತೆ ಆಗಿದೆ. ಇಲ್ಲಿ ಹಲವಾರು ಕೋರ್ಸ್, ವಿಭಾಗಗಳಿದ್ದಾವೆ. ಇಲ್ಲಿನ ಬಹುಮುಖ ಪ್ರತಿಭೆಗಳು, ಗಣನೀಯ ಸಾಧನೆಗಳು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದರು.
ನ್ಯಾಕ್ ಮಾನ್ಯತೆ ಎನ್ನುವುದು ಎಲ್ಲಾ ಕಾಲೇಜುಗಳಿಗೂ ಅನಿವಾರ್ಯವಾಗಿದೆ. ಅದರಲ್ಲೂ ಪದವಿ ಕಾಲೇಜುಗಳಿ ಬಹುಮುಖ್ಯ. ಈ ಕಾಲೇಜು 2004, 2012 ಮತ್ತು 2018ರಲ್ಲಿ ಮೂರು ವರ್ಷ ಬಾರಿ ನ್ಯಾಕ್ ಪ್ರಕ್ರಿಯೆಗೆ ಒಳಗಾಗಿದೆ. ಮೂರು ಬಾರಿಯೂ ನ್ಯಾಕ್ ಪ್ರಕ್ರಿಯೆಯಲ್ಲಿ ಕಾಲೇಜಿಗೆ ‘ಬಿ’ ಗ್ರೇಡ್ ಲಭಿಸಿದೆ ಎಂದು ತಿಳಿಸಿದರು.
2024ರ ಈ ವರ್ಷದಲ್ಲಿ ಅಕ್ಟೋಬರ್.9 ಮತ್ತು 10ರಂದು ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟಿತ್ತು. ನ್ಯಾಕ್ ಮಾನ್ಯತೆಗೆ ಮಾನದಂಡ ಅಂದ್ರೆ ಕಾಲೇಜಿನ ಎಲ್ಲಾ ರೀತಿಯ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿನಿಯರ ಸಾಧನೆಗಳು, ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ದೊರಕುತ್ತಿರುವಂತ ಶೈಕ್ಷಣಿಕ ಸೌಲಭ್ಯಗಳು, ಮೂಲಭೂತ ಸೌಲಭ್ಯಗಳು, ಈ ಎಲ್ಲವನ್ನು ಪರಿಶೀಲಿಸಿ ಜೊತೆಗೆ ನಮ್ಮಲ್ಲಿನ ದಾಖಲೆಗಳನ್ನು ಆಧರಿಸಿ ನ್ಯಾಕ್ ಮಾನ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಈ ಬಾರಿ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2.8 ಶ್ರೇಯಾಂಕದೊಂದಿಗೆ ಬಿ++ ಶ್ರೇಣಿಯ ಮಾನ್ಯತೆಯನ್ನು ನೀಡಲಾಗಿ ಎಂಬುದನ್ನು ಹೇಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ ಎಂದರು.
ಇದಕ್ಕಾಗಿ ಶ್ರಮಿಸಿದಂತ ಎಲ್ಲಾ ಕಾಲೇಜಿನ ಅಧ್ಯಾಪಕರಿಗೆ, ಕಾರ್ಯಾಲಯ ಸಿಬ್ಬಂದಿ ವರ್ಗದವರಿಗೆ, ಡಿ-ಗ್ರೂಪ್ ನೌಕರರಿಗೆ, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಹೊರ ಹೋಗಿರುವಂತ ಹಿರಿಯ ವಿದ್ಯಾರ್ಥಿನಿಯರಿಗೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವಂತ ಎಲ್ಲಾ ವಿದ್ಯಾರ್ಥಿನಿಯರಿಗೆ, ವಿದ್ಯಾರ್ಥಿನಿಯರ ಪೋಷಕರಿಗೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ನಮ್ಮ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದಂತ ಗೋಪಾಲಕೃಷ್ಣ ಬೇಳೂರು ಅವರು ನ್ಯಾಕ್ ಪ್ರಕ್ರಿಯೆಗೆ ಮುತುವರ್ಜಿ ವಹಿಸಿ, ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ, ಇಂದು ನ್ಯಾಕ್ ಮಾನ್ಯತೆ ದೊರೆಯಲು ಕಾರಣಕರ್ತರಾಗಿದ್ದಾರೆ. ಅವರಿಗೂ ಕೂಡ ಧನ್ಯವಾದಗಳು. ಅವರೊಟ್ಟಿಗೆ ಕಾಲೇಜು ಅಭಿವೃದ್ಧಿ ಸಮತಿಯ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜೇಶ್ವರಿ ಧನ್ಯವಾದವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಡಾ.ಶಿವಾನಂದ್ ಎಸ್, ಡಾ.ಮಹಾವೀರ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಡಾ. ಮೂಕಪ್ಪ ನಾಯ್ಕ, ಮಧುಮಾಲತಿ, ಉಷಾ ಎನ್. ರಂಜನ್ ಶೆಟ್ಟಿ, ಎಲ್.ಚಂದ್ರಪ್ಪ, ವೈ.ವಿ.ಗೋಪಾಲಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ‘ವೃದ್ಧೆ ಸಾವು’
ರೈತರ ಮಕ್ಕಳಿಗೆ ಗುಡ್ ನ್ಯೂಸ್: ‘ಜೇನುಗಾರಿಕೆ ತರಬೇತಿ’ಗೆ ಅರ್ಜಿ ಆಹ್ವಾನ