ಶಿವಮೊಗ್ಗ: ಬಡಜನರ ಹಸಿವು ನೀಗಿಸುವ ಸದುದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟಿನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಶುಚಿ-ರುಚಿಯಾದ ಪೌಷ್ಟಿಕ ಆಹಾರವನ್ನು ಕೈಗೆಟುಕುವ ದರದಲ್ಲಿ ಪೂರೈಸುವ ಕನಸಿನೊಂದಿಗೆ ಕಾಂಗ್ರೆಸ್ ಸರ್ಕಾರ ಆರಂಭಿಸಿದ “ಇಂದಿರಾ ಕ್ಯಾಂಟೀನ್” ಅನ್ನು ಇಂದು ಶಿವಮೊಗ್ಗದ ವಿದ್ಯಾನಗರದಲ್ಲಿ ಉದ್ಘಾಟಿಸಿ, ಮುಖಂಡರುಗಳೊಂದಿಗೆ ಉಪಹಾರವನ್ನು ಸವಿದರು.
ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ “ಇಂದಿರಾ ಕ್ಯಾಂಟೀನ್” ಸಿದ್ಧಗೊಂಡಿದ್ದು, ಗ್ರಾಹಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಕ್ಯಾಂಟೀನ್ ಆಟೋ ಚಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ನಿಜವಾದ ಆಶಾಕಿರಣವಾಗಿದೆ. ಇದುವೇ ಕಾಂಗ್ರೆಸ್ ಸರ್ಕಾರದ ಜನಪರ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಪ್ರತಿರೂಪವಾಗಿದೆ ಎಂದರು.








