ನವದೆಹಲಿ: ಇಂಡಿಯಾ ಟುಡೇ ಪತ್ರಕರ್ತರೊಬ್ಬರು ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ತಂಡದಿಂದ ಹಲ್ಲೆಗೊಳಗಾದ ನಂತರ ಕಾಂಗ್ರೆಸ್ “ಕ್ರೌರ್ಯದಲ್ಲಿ ತೊಡಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಡಿಕಾರಿದ್ದಾರೆ. ಕಾಶ್ಮೀರದ ದೋಡಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೆರಿಕದಲ್ಲಿ ಪತ್ರಕರ್ತನ ಮೇಲೆ ನಡೆದ ಕ್ರೌರ್ಯವನ್ನ ಪ್ರಶ್ನಿಸಲು ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ ಪಿಚ್’ನ್ನ ತರಾಟೆಗೆ ತೆಗೆದುಕೊಂಡರು.
“ಅವರು (ಕಾಂಗ್ರೆಸ್) ಮೊಹಬ್ಬತ್ ಕಿ ದುಕಾನ್ ನಡೆಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಮ್ಮ ದೇಶದ ಪತ್ರಕರ್ತರೊಬ್ಬರನ್ನು ಅಮೆರಿಕದಲ್ಲಿ ಕಾಂಗ್ರೆಸ್ ಕ್ರೌರ್ಯಕ್ಕೆ ಒಳಪಡಿಸಿತು. ಅಮೆರಿಕದಲ್ಲಿ ಭಾರತದ ಮಗನಿಗೆ ಅವಮಾನವಾಗಿದೆ. ವಾಕ್ ಸ್ವಾತಂತ್ರ್ಯದ ಚಾಂಪಿಯನ್ ಎಂದು ಹೇಳಿಕೊಳ್ಳುವವರು ಕ್ರೌರ್ಯದಲ್ಲಿ ತೊಡಗಿದ್ದಾರೆ” ಎಂದರು. ಅಂದ್ಹಾಗೆ, 42 ವರ್ಷಗಳಲ್ಲಿ ದೋಡಾಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಪತ್ರಕರ್ತನನ್ನು ನಡೆಸಿಕೊಳ್ಳುವ ರೀತಿ ಅಮೆರಿಕದ ನೆಲದಲ್ಲಿ ಭಾರತದ ಘನತೆಯನ್ನ ಕುಗ್ಗಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ಸಂವಿಧಾನ” ಎಂಬ ಪದವು ಕಾಂಗ್ರೆಸ್ಗೆ ಸರಿಹೊಂದುವುದಿಲ್ಲ ಎಂದು ಅವರು ಹೇಳಿದರು. ಇನ್ನು ಬಿಜೆಪಿ ಸಂವಿಧಾನವನ್ನ ಬುಡಮೇಲು ಮಾಡುತ್ತಿದೆ ಎಂದು ಪದೇ ಪದೇ ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.
BREAKING : ‘ವೇದಾಂತ ಅಲ್ಯೂಮಿನಿಯಂ CEO’ ಸ್ಥಾನಕ್ಕೆ ‘ಜಾನ್ ಸ್ಲೋವೆನ್’ ರಾಜೀನಾಮೆ
BREAKING : ಬಿಜೆಪಿ ಶಾಸಕ ‘ಮುನಿರತ್ನ’ ಪೊಲೀಸರ ವಶಕ್ಕೆ |MLA Munirathna Arrest
Ayushman Card : ಜನ ಸಾಮಾನ್ಯರಿಗೆ ಬಿಗ್ ಅಲರ್ಟ್ ; ಇವುಗಳಿದ್ದರೆ ಮಾತ್ರ ‘5 ಲಕ್ಷ ರೂಪಾಯಿ’ವರೆಗೆ ‘ಉಚಿತ ಚಿಕಿತ್ಸೆ’