ನವದೆಹಲಿ : ಹಸಿರು ಇಂಧನ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ, ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನ ಪೂರೈಸಿದ ಮೊದಲ ಜಿ20 ರಾಷ್ಟ್ರವಾಗಿ ದೇಶದ ಸಾಧನೆಯನ್ನ ಎತ್ತಿ ತೋರಿಸಿದರು.
ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಉದ್ಘಾಟನಾ ಅಂತರರಾಷ್ಟ್ರೀಯ ಸೌರ ಉತ್ಸವವನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಗುರಿಗಳನ್ನ ತಲುಪುವಲ್ಲಿ ಸೌರ ಶಕ್ತಿಯ ಗಮನಾರ್ಹ ಬೆಳವಣಿಗೆ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ, “ಕಳೆದ 10 ವರ್ಷಗಳಲ್ಲಿ ನಮ್ಮ ಸೌರ ಶಕ್ತಿ ಸಾಮರ್ಥ್ಯವು 33 ಪಟ್ಟು ಹೆಚ್ಚಾಗಿದೆ… ಈ ವೇಗ ಮತ್ತು ಪ್ರಮಾಣವು 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಹೇಳಿದರು.
ಇನ್ನು ಸೌರ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯು ಸ್ಪಷ್ಟ ವಿಧಾನದ ಫಲಿತಾಂಶವಾಗಿದೆ ಎಂದರು.
ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಚೀನಾ ಹಿಂದಿಕ್ಕಿದ ‘ಭಾರತ’, ಷೇರುಗಳು ‘ಅರ್ಧದಷ್ಟು’ ಏರುತ್ತವೆ : ಮೋರ್ಗನ್ ಸ್ಟಾನ್ಲಿ
BREAKING : ಉಕ್ರೇನ್ ಜೊತೆಗೆ ಶಾಂತಿ ಮಾತುಕತೆಗೆ ‘ಓಕೆ’ ಎಂದ ಪುಟಿನ್ : ‘ಭಾರತ, ಚೀನಾ, ಬ್ರೆಜಿಲ್’ ಮಧ್ಯಸ್ಥಿಕೆ