ಪ್ಯಾರಿಸ್: ಇಲ್ಲಿ ನಡೆಯುತ್ತಿರುವಂತ ಪ್ಯಾರಿಸ್ ಒಲಂಪಿಕ್ಸ್ 2024ರ ಪಂದ್ಯಾವಳಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಂದಿದೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಹಾಗೂ ಸರಬ್ ಜಿತ್ ಸಿಂಗ್ ಅವರು ಐತಿಹಾಸಿಕ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಈಗಾಗಲೇ ಕಂಚಿನ ಪದಕ ಗೆದ್ದಿರುವ ಮನು ಭಾಕರ್ ಈ ಬಾರಿ ಮೂರನೇ ಸ್ಥಾನಕ್ಕಾಗಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚಿನ ಪದಕಕ್ಕಾಗಿ ಸೆಣಸಿ, ಅಂತಿಮವಾಗಿ 10 ಮೀಟರ್ ಏರ್ ಪಿಸ್ತೂಲ್ ಜೋಡಿ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
🇮🇳🔥 𝗜𝗻𝗱𝗶𝗮'𝘀 𝗲𝗹𝗶𝘁𝗲 𝘀𝗵𝗼𝗼𝘁𝗲𝗿𝘀! A historic achievement for Manu Bhaker and Sarabjot Singh as they win India's first-ever team medal in shooting at the Olympics.
🧐 Here's a look at India's shooting medallists in the Olympics over the years.
👉 𝗙𝗼𝗹𝗹𝗼𝘄… pic.twitter.com/Vf2yp4r2vH
— India at Paris 2024 Olympics (@sportwalkmedia) July 30, 2024
ಪುರುಷರ ಸಿಂಗಲ್ಸ್ ಸ್ಕಲ್ಸ್ನಲ್ಲಿ ಬಲರಾಜ್ ಪನ್ವಾರ್ ಮತ್ತೆ ಕಣಕ್ಕಿಳಿಯಲಿದ್ದು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ರೋವರ್ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.
ಅಶ್ವಾರೋಹಿ ಸ್ಪರ್ಧೆಯು ಇಂದು ನಡೆಯಲಿದ್ದು, ಡ್ರೆಸೇಜ್ ವೈಯಕ್ತಿಕ ಗ್ರ್ಯಾಂಡ್ ಪ್ರಿಕ್ಸ್ ಸ್ಪರ್ಧೆಯ ಮೊದಲ ದಿನದಂದು ಅನುಷ್ ಅಗರ್ವಾಲ್ಲಾ ಭಾಗವಹಿಸಲಿದ್ದಾರೆ.
ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಗ್ರೂಪ್ ಹಂತದ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾದ ಫಜರ್ ಮತ್ತು ಅಲ್ಫಿಯಾನ್-ಮೊಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಎದುರಿಸಲಿದ್ದಾರೆ.
ಭಾರತದ ಎಲೈಟ್ ಶೂಟರ್ಗಳು! ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.
BREAKING :40 ವರ್ಷಗಳ ಹಿಂದೆಯೇ HD ಕುಮಾರಸ್ವಾಮಿಗೆ ‘ಮುಡಾ’ ಸೈಟ್ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ ತಿರುಗೇಟು