ನವದೆಹಲಿ : ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 4 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸದಲ್ಲಿ ಭಾರತ ತಂಡ ತನ್ನ ಮೊದಲ ಟಿ20 ಪಂದ್ಯವನ್ನು ನವೆಂಬರ್ 8ರಂದು ಡರ್ಬನ್’ನಲ್ಲಿ ಆಡಲಿದೆ. ಇದಾದ ನಂತರ ನವೆಂಬರ್ 10ರಂದು ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕಾಗಿ ತಂಡಗಳು ಗಕೆಬರ್ಹಾಗೆ ತೆರಳಲಿವೆ. ನಂತರ ಉಳಿದ ಎರಡು ಪಂದ್ಯಗಳು ಸೆಂಚುರಿಯನ್ (ನವೆಂಬರ್ 13) ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ (ನವೆಂಬರ್ 15) ನಡೆಯಲಿದೆ.
ಗಂಭೀರ್ ಪ್ರವಾಸಕ್ಕೆ ಹೋಗುವುದಿಲ್ಲ, ಈ ಅನುಭವಿ ಮುಖ್ಯ ಕೋಚ್ ಆಗಲಿದ್ದಾರೆ.!
ಇದೀಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಈ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಇರುವುದಿಲ್ಲ. ನವೆಂಬರ್ 4 ರ ಸುಮಾರಿಗೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡ ನವೆಂಬರ್ 11 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಹೀಗಾಗಿ ಗಂಭೀರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಮಾತ್ರ ತೆರಳಲು ಸಾಧ್ಯವಾಗುತ್ತದೆ.
ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಸೋಮವಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉನ್ನತ ಅಧಿಕಾರಿಯೊಬ್ಬರು ಈ ನಿರ್ಧಾರದ ಬಗ್ಗೆ ತಿಳಿಸಿದರು. ಈ ನಾಲ್ಕು ಪಂದ್ಯಗಳ T20 ಸರಣಿಯನ್ನು ಆರಂಭದಲ್ಲಿ ನಿರ್ಧರಿಸಲಾಗಿಲ್ಲ, ಆದರೆ BCCI ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ನಡುವಿನ ಮಾತುಕತೆಯ ನಂತರ ಈ ಪ್ರವಾಸವನ್ನು ಅಂತಿಮಗೊಳಿಸಲಾಗಿದೆ.
ದೇಶದ ಮೊದಲ ‘ಖಾಸಗಿ ಮಿಲಿಟರಿ ವಿಮಾನ ಘಟಕ’ ಆರಂಭ ; ‘C-295’ ಕುರಿತು ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ!
BREAKING: ‘ವಕ್ಫ್ ಬೋರ್ಡ್’ನಿಂದ ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ: ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ
BREAKING NEWS: ಮುಡಾ ಮಾಜಿ ಆಯುಕ್ತ ನಟೇಶ್, ದಿನೇಶ್ ಕುಮಾರ್, ಬಿಲ್ಡರ್ ಮಂಜುನಾಥ್ ಮನೆ ಮೇಲೆ ED ದಾಳಿ | ED Raid