ಬೆಂಗಳೂರು: ಶೀಘ್ರವೇ ದೇಶದ ಮೊದಲ KHIR ಸಿಟಿ ಆರಂಭಿಸಲಾಗುತ್ತದೆ. ದೊಡ್ಡಬಳ್ಳಾಪುರ-ದಾಬಸ್ ಪೇಟೆ ಮಧ್ಯೆ 2 ಸಾವಿರ ಎಕರೆಯಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂಬುದಾಗಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ದೇಶದ ಮೊದಲ ಕೆಎಚ್‌ಐಆರ್ ಸಿಟಿ ಶೀಘ್ರದಲ್ಲಿ ಆರಂಭವಾಗಲಿದೆ. ದೊಡ್ಡಬಳ್ಳಾಪುರ – ದಾಬಸ್‌ಪೇಟೆ ಮಧ್ಯೆ 2 ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ಎಂದಿದ್ದಾರೆ.
ಜೀವ ವಿಜ್ಞಾನ, ಅಡ್ವಾನ್ಸ್‌ಡ್ ಮ್ಯಾನುಫ್ಯಾಕ್ಚರಿಂಗ್, ಸೆಮಿ ಕಂಡಕ್ಟರ್ ಸೇರಿ ಆಯ್ದ ವಲಯಗಳಲ್ಲಿ ಜಾಗತಿಕ ಮಟ್ಟದ ಪ್ರತಿಷ್ಠಿತ ವಿವಿಗಳು, ಕಂಪನಿಗಳ ಕ್ಯಾಂಪಸ್‌ಗಳಿಗೆ ಉದ್ದೇಶಿತ ಕೆಎಚ್‌ಐಆರ್ ಸಿಟಿಯಲ್ಲಿ ಅವಕಾಶ ನೀಡಲಾಗುತ್ತಿದೆ. ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಉದ್ದಿಮೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಎತ್ತರಕ್ಕೆ ಬೆಳೆಯಲು ಇದರಿಂದ ಸಾಧ್ಯವಾಗಲಿದೆ. ಮುಖ್ಯವಾಗಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಬೇಕು ಎಂಬುದು ಈ ಯೋಜನೆಯ ಆಶಯ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ದೇಶದ ಮೊದಲ ಕೆಎಚ್‌ಐಆರ್ ಸಿಟಿ ಶೀಘ್ರದಲ್ಲಿ ಆರಂಭವಾಗಲಿದೆ. ದೊಡ್ಡಬಳ್ಳಾಪುರ – ದಾಬಸ್‌ಪೇಟೆ ಮಧ್ಯೆ 2 ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ.
ಜೀವ ವಿಜ್ಞಾನ, ಅಡ್ವಾನ್ಸ್‌ಡ್ ಮ್ಯಾನುಫ್ಯಾಕ್ಚರಿಂಗ್, ಸೆಮಿ ಕಂಡಕ್ಟರ್ ಸೇರಿ ಆಯ್ದ ವಲಯಗಳಲ್ಲಿ ಜಾಗತಿಕ ಮಟ್ಟದ ಪ್ರತಿಷ್ಠಿತ ವಿವಿಗಳು, ಕಂಪನಿಗಳ ಕ್ಯಾಂಪಸ್‌ಗಳಿಗೆ ಉದ್ದೇಶಿತ ಕೆಎಚ್… pic.twitter.com/vqzj4byuoJ
— DIPR Karnataka (@KarnatakaVarthe) August 19, 2024
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ: ನಾಗಸಂದ್ರ-ಮಾದಾವರ ಮಧ್ಯೆ ರೈಲು ಪರೀಕ್ಷಾ ಸಂಚಾರ ಆರಂಭ | Namma Metro
BREAKING : ಹಾವೇರಿಯಲ್ಲಿ ಭೀಕರ ಅಪಘಾತ : ‘NWKRTC’ ಬಸ್ ಪಲ್ಟಿಯಾಗಿ 13 ಪ್ರಯಾಣಿಕರಿಗೆ ಗಂಭೀರ ಗಾಯ!