ಮಂಗಳೂರು: ದೇಶದ ಮೊದಲ ಇನ್ನೋವೇಶನ್ ಹಬ್ ಕರ್ನಾಟಕದಲ್ಲಿ ಆರಂಭವಾಗಿದೆ. ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. ಈ ಇನ್ನೋವೇಶನ್ ಹಬ್ನಲ್ಲಿ ವಿದ್ಯಾರ್ಥಿಗಳು ತಾವೇ ಸ್ವತಃ ಕೆಲವು ಯೋಜನೆಗಳನ್ನು ಕೈಗೆತ್ತಿಕೊಂಡು ಅಧ್ಯಯನ ಮಾಡಬಹುದಾಗಿದೆ.
ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ತಂತ್ರಜ್ಞಾನದಂತಹ ಮುಂಚೂಣಿ ಕ್ಷೇತ್ರಗಳಲ್ಲಿ ಆಸಕ್ತಿ ಮೂಡಿಸಲು ಈ ಇನ್ನೋವೇಷನ್ ಹಬ್ ಸಹಕಾರಿಯಾಗಲಿದೆ. ಈ ಕೇಂದ್ರವು ವಿದ್ಯಾರ್ಥಿಗಳಿಗೆ ಕೃಷಿ, ಗೃಹ ಕೈಗಾರಿಕೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿನ ಪ್ರಸ್ತುತ ಸಮಸ್ಯೆ ಹಾಗೂ ಸುಧಾರಣೆಗಳ ಸಂಶೋಧನೆಗೆ ನೆರವಾಗಲಿದೆ.