ನಸ್ಸಾವು (ಬಹಾಮಾಸ್) : ವಿಶ್ವ ಅಥ್ಲೆಟಿಕ್ಸ್ ರಿಲೇಯಲ್ಲಿ ಸೋಮವಾರ ಎರಡನೇ ಸ್ಥಾನ ಪಡೆದ ಭಾರತದ ಮಹಿಳಾ 4×400 ಮೀಟರ್ ರಿಲೇ ತಂಡ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ.

ರೂಪಲ್ ಚೌಧರಿ, ಎಂ.ಆರ್.ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ತಂಡ 3 ನಿಮಿಷ 29.35 ಸೆಕೆಂಡುಗಳಲ್ಲಿ ಗುರಿ ತಲುಪಿ ಜಮೈಕಾ (3:28.54) ನಂತರ ಎರಡನೇ ಸ್ಥಾನ ಪಡೆದು ಪ್ಯಾರಿಸ್ ಗೇಮ್ಸ್ ಟಿಕೆಟ್ ಕಾಯ್ದಿರಿಸಿತು.

ಭಾನುವಾರ ನಡೆದ ಮೊದಲ ಸುತ್ತಿನ ಅರ್ಹತಾ ಹೀಟ್ನಲ್ಲಿ ಭಾರತ ತಂಡ 3 ನಿಮಿಷ 29.74 ಸೆಕೆಂಡುಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದಿತ್ತು.

Share.
Exit mobile version