ನವದೆಹಲಿ : ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿನೀಡಿದ್ದು, ರೈಲ್ವೆಯಲ್ಲಿ 12 ನೇ ತರಗತಿ ಉತ್ತೀರ್ಣರಾದವರಿಗೆ 10,884 ಹುದ್ದೆಗಳು ಖಾಲಿ ಇವೆ. ಇದಕ್ಕಾಗಿ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನೋಟಿಸ್ ಓದಿ ಸೂಚನೆಗಳನ್ನು ಪಾಲಿಸಬೇಕು.
ಹುದ್ದೆಗಳ ಸಂಪೂರ್ಣ ವಿವರ
ಅಕೌಂಟ್ಸ್ ಕ್ಲರ್ಕ್ ಟೈಪಿಸ್ಟ್: 361 ಹುದ್ದೆಗಳು
ಕಮರ್ಷಿಯಲ್ ಟಿಕೆಟ್ ಕ್ಲರ್ಕ್: 1985 ಹುದ್ದೆಗಳು,
ಜೂನಿಯರ್ ಕ್ಲರ್ಕ್ ಟೈಪಿಸ್ಟ್: 990 ಹುದ್ದೆಗಳು
ಟ್ರೈನ್ ಕ್ಲರ್ಕ್: ಒಟ್ಟು 68 ಹುದ್ದೆಗಳು.
ಫ್ರೈಟ್ ಟ್ರೈನ್ ಮ್ಯಾನೇಜರ್: ಒಟ್ಟು 2684 ಹುದ್ದೆಗಳು
ಸ್ಟೇಷನ್ ಮಾಸ್ಟರ್: ಒಟ್ಟು 963 ಹುದ್ದೆಗಳು,
ಸೀನಿಯರ್ ಕ್ಲರ್ಕ್ ಟೈಪಿಸ್ಟ್: ಒಟ್ಟು 725 ಹುದ್ದೆಗಳು,
ಚೀಫ್ ಕಮರ್ಷಿಯಲ್ ಟಿಕೆಟ್ ಸೂಪರ್ವೈಸರ್: 1737 ಹುದ್ದೆಗಳು,
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಟೈಪಿಸ್ಟ್: ಒಟ್ಟು 1371 ಹುದ್ದೆಗಳು
ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿ, ಪದವಿ ಇತ್ಯಾದಿ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ : ಸಿಬಿಟಿ 1, ಸಿಬಿಟಿ 2, ಕೌಶಲ್ಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ದಿನಾಂಕ: ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಅಧಿಕೃತ ವೆಬ್ಸೈಟ್: https://indianrailways.gov.in/