ಲಂಡನ್: ಲಂಡನ್ ನಲ್ಲಿ ಭಾರತೀಯ ಮೂಲದ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಯುಕೆ ಮೆಟ್ರೋಪಾಲಿಟನ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ 9 ರಂದು ಬರ್ನ್ ಓಕ್ ಬ್ರಾಡ್ವೇಯಲ್ಲಿ ಅನಿತಾ ಮುಖೆ (66) ಅವರನ್ನು ಆರೋಪಿಗಳು ಚಾಕುವಿನಿಂದ ಇರಿದುಕೊಂದಿದ್ದಾರೆ.
ಮೃತ ಅನಿತಾ ಮುಖೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ವೈದ್ಯಕೀಯ ಕಾರ್ಯದರ್ಶಿಯಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 66 ವರ್ಷದ ಮಹಿಳೆಗೆ ಚಾಕು ಇರಿತ ಗಾಯಗಳಿಗೆ ಘಟನ ಸ್ಥಳಧಲ್ಲಿ ಚಿಕಿತ್ಸೆ ನೀಡಲಾಯಿತು. ದುರದೃಷ್ಟವಶಾತ್, ತುರ್ತು ಸೇವೆಗಳ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವಳು ಸ್ಥಳದಲ್ಲೇ ಸಾವನ್ನಪ್ಪಿದಳು. ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ” ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಘಟನೆ ನಡೆದ ದಿನವೇ ಕೊಲಿಂಡೇಲ್ ಪ್ರದೇಶದಲ್ಲಿ ಕೊಲೆ ಶಂಕೆಯ ಮೇಲೆ ಆರೋಪಿ ಜಲಾಲ್ ದೆಬೆಲ್ಲಾ (22) ಎಂಬಾತನನ್ನು ಬಂಧಿಸಲಾಗಿದೆ ಎನ್ನಲಾಗಿದೆ.