ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ. ದಂಪತಿಯ 14 ವರ್ಷದ ಮಗ ಮಾತ್ರ ಬದುಕುಳಿದಿದ್ದಾನೆ.
ಟೆನ್ನೆಸ್ಸಿಯಿಂದ ನೈಋತ್ಯಕ್ಕೆ 870 ಮೈಲಿ ದೂರದಲ್ಲಿರುವ ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮಣಿ (45), ಅವರ ಪತ್ನಿ ಪ್ರದೀಪ ಅರವಿಂದ್ (40) ಮತ್ತು ಅವರ 17 ವರ್ಷದ ಮಗಳು ಆಂಡ್ರಿಲ್ ಅರವಿಂದ್ ಬುಧವಾರ (ಆಗಸ್ಟ್ 14) ಬೆಳಿಗ್ಗೆ 5.45 ರ ಸುಮಾರಿಗೆ ಲ್ಯಾಂಪಾಸ್ ಕೌಂಟಿ ಬಳಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಲಕನಿಗೆ ಆರ್ಥಿಕವಾಗಿ ಸಹಾಯ ಮಾಡಲು ಸ್ಥಾಪಿಸಲಾದ ಗೋಫಂಡ್ ಮಿ ಪುಟದ ಪ್ರಕಾರ, 14 ವರ್ಷದ ಆದಿರ್ಯನ್ ವಾಹನದಲ್ಲಿ ಇರಲಿಲ್ಲ ಮತ್ತು ಹೀಗಾಗಿ ಕುಟುಂಬದ ಉಳಿದಿರುವ ಏಕೈಕ ಸದಸ್ಯನಾಗಿದ್ದಾನೆ. ಈ ಪುಟವು ಇಲ್ಲಿಯವರೆಗೆ $ 700,000 ಕ್ಕಿಂತ ಹೆಚ್ಚು ಸಂಗ್ರಹಿಸಿದೆ.
“ಅರವಿಂದ್ (45) ಮತ್ತು ಪ್ರದೀಪ (42) ದಂಪತಿಗೆ ಆಂಡ್ರಿಲ್ (17) ಮತ್ತು ಆದಿರ್ಯನ್ (14) ಎಂಬ ಇಬ್ಬರು ಮಕ್ಕಳಿದ್ದಾರೆ” ಎಂದು ಗೋಫಂಡ್ ಮಿ ಪುಟದಲ್ಲಿ ಬರೆಯಲಾಗಿದೆ.
ಏನಾಯಿತು?
ವರದಿಗಳ ಪ್ರಕಾರ, ಅರವಿಂದ್ ಮತ್ತು ಅವರ ಪತ್ನಿ ತಮ್ಮ ಮಗಳನ್ನು ಉತ್ತರ ಟೆಕ್ಸಾಸ್ನ ಕಾಲೇಜಿಗೆ ಕರೆದೊಯ್ಯುತ್ತಿದ್ದರು. 17 ವರ್ಷದ ಬಾಲಕಿ ಆಗಷ್ಟೇ ಹೈಸ್ಕೂಲ್ ಮುಗಿಸಿ ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದಳು