ಮಾಲೆ: ಮಾಲ್ಡೀವ್ಸ್ ನ ಉಪ ಸಚಿವರೊಬ್ಬರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಮಾಲ್ಡೀವ್ಸ್ ನ ಭಾರತೀಯ ಹೈಕಮಿಷನರ್ ಮುನು ಮಹಾವರ್ ಅವರು ಮಾಲ್ಡೀವ್ಸ್ ಸರಕಾರದ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ರವಿವಾರ ತಿಳಿಸಿವೆ.
ಮಾಲ್ಡೀವ್ಸ್ಗೆ ಸಮೀಪದಲ್ಲಿರುವ ಲಕ್ಷದ್ವೀಪಕ್ಕೆ ಇತ್ತೀಚೆಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರನ್ನು ಅಣಕಿಸುವ ಮತ್ತು ಅಗೌರವದಿಂದ ಉಲ್ಲೇಖಿಸುವ ಮಾಲ್ಡೀವ್ಸ್ ಯುವ ಸಬಲೀಕರಣ ಉಪ ಸಚಿವೆ ಮರಿಯಮ್ ಶಿಯುನಾ ಅವರ ಪೋಸ್ಟ್ ಬಗ್ಗೆ ಹೆಚ್ಚುತ್ತಿರುವ ಆಕ್ರೋಶದ ಮಧ್ಯೆ ಈ ಬೆಳವಣಿಗೆ ನಡೆದಿದೆ. “ಮಾಲ್ಡೀವ್ಸ್ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರ ಇತ್ತೀಚಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಭಾರತೀಯ ಹೈಕಮಿಷನರ್ ಈ ವಿಷಯವನ್ನು ಮಾಲೆಯಲ್ಲಿ ಕೈಗೆತ್ತಿಕೊಂಡಿದ್ದಾರೆ” ಎಂದು ಮೂಲಗಳು ತಿಳಿಸಿವೆ.