ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಶುರುವಾದ ಕೆಲವೇ ದಿನಗಳಲ್ಲಿ ಭಾರತವು ಎರಡು ಪದಕಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಭಾರತೀಯ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಡಿ ಲಾ ವಿಲೆಟ್ ಪಾರ್ಕ್‌ನಲ್ಲಿರುವ ಇಂಡಿಯಾ ಹೌಸ್‌ಗೆ ಆಗಮಿಸುತ್ತಿದ್ದು, ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಗುತ್ತಿದೆ. ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್, ರೋಹನ್ ಬೋಪಣ್ಣ, ಶರತ್ ಕಮಲ್, ಮನಿಕಾ ಬಾತ್ರಾ ಮತ್ತು ಅರ್ಜುನ್ ಬಾಬುತಾ ಅವರಂತಹ ಭಾರತದ ಅಗ್ರಗಣ್ಯ ಕ್ರೀಡಾಪಟುಗಳನ್ನು ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಲಾಯಿತು.
ಅಥ್ಲೀಟ್‌ಗಳನ್ನು ಆತ್ಮೀಯವಾಗಿ ಭೇಟಿ ಮಾಡಿದ ಐಒಸಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತನಾಡಿ , “ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ನಿರ್ಮಿಸಲಾದ ಇಂಡಿಯಾ ಹೌಸ್‌ಗೆ ಸುಸ್ವಾಗತ. ಭಾರತವನ್ನು ಪ್ರತಿನಿಧಿಸುವ ಅನೇಕ ಭಾರತೀಯ ಕ್ರೀಡಾಪಟುಗಳು ಇಂದು ಇಲ್ಲಿದ್ದಾರೆ. ನಿಮ್ಮಲ್ಲಿನ ಪ್ರತಿಯೊಬ್ಬರೂ ನಮ್ಮ ತಲೆ ಗರ್ವದಿಂದ ಎತ್ತುವಂತೆ ಮಾಡಿದ್ದೀರಿ. ಪದಕ ಗೆದ್ದು, ನಮ್ಮನ್ನು ಗೌರವ ದೊರೆಯುವಂತೆ ಮಾಡಿದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ವಿಶೇಷ ಧನ್ಯವಾದಗಳು. ಸರಬ್ಜೋತ್ ಸಿಂಗ್ ಅವರು ಇಂದು ನಮ್ಮೊಂದಿಗೆ ಇದ್ದಾರೆ ಮತ್ತು ನಾವೆಲ್ಲರೂ ಎದ್ದು ನಿಂತು ಅವರಿಗೆ ನಮಸ್ಕರಿಸಬೇಕಾಗಿದೆ,” ಎಂದರು.
ಡೋಲು ಬಾರಿಸುವುದರ ಜೊತೆ ಭಾರತೀಯ ಸಾಂಪ್ರದಾಯಿಕ ‘ತಿಲಕ’ ಹಚ್ಚುವುದರೊಂದಿಗೆ ಆಟಗಾರರನ್ನು ಸ್ವಾಗತಿಸಲಾಯಿತು. ವಿಶ್ವದ ಅತಿದೊಡ್ಡ ಕ್ರೀಡಾ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಎಲ್ಲ ಆಟಗಾರರಿಗೆ ತಮ್ಮ ಪ್ರಯತ್ನಗಳಿಗಾಗಿ ನೀತಾ ಅಂಬಾನಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಒಲಿಂಪಿಕ್ ಕ್ರೀಡಾಕೂಟವನ್ನು ಬೆಂಬಲಿಸಲು ಇಂಡಿಯಾ ಹೌಸ್‌ನಲ್ಲಿ ಡಿಜಿಟಲ್ ಜ್ಯೋತಿಯನ್ನು ಸಹ ಬೆಳಗಿಸಲಾಯಿತು.
BIG UPDATE: ಕೇರಳದ ವಯನಾಡಲ್ಲಿ ಭೂಕುಸಿತ: ಮೃತರ ಸಂಖ್ಯೆ 246ಕ್ಕೆ ಏರಿಕೆ | Wayanad landslide