ನವದೆಹಲಿ : ಭಾರತ-ಪಾಕಿಸ್ತಾನದ ಗಡಿಯಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಶುಕ್ರವಾರ ಭಾರತೀಯ ಸೇನೆಯ ಡ್ರೋನ್ ಪಾಕಿಸ್ತಾನದ ಪ್ರದೇಶವನ್ನ ಪ್ರವೇಶಿಸಿದ್ದು, ಈ ಘಟನೆಯ ಬಗ್ಗೆ ಭಾರತೀಯ ಸೇನೆ ವಿವರವಾದ ಮಾಹಿತಿಯನ್ನ ನೀಡಿದೆ. ಡ್ರೋನ್ ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು ಪಾಕಿಸ್ತಾನದ ಪ್ರದೇಶವನ್ನ ಪ್ರವೇಶಿಸಿದೆ.
ಪಾಕಿಸ್ತಾನಿ ಸೈನಿಕರಿಗೆ ಸಿಕ್ಕ ಡ್ರೋನ್.!
ಶುಕ್ರವಾರ ಬೆಳಗ್ಗೆ 9.25ಕ್ಕೆ ಭಾರತೀಯ ಭೂಪ್ರದೇಶದೊಳಗಿನ ತರಬೇತಿ ಡ್ರೋನ್ ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು ಭಾರತದ ಭಿಂಬರ್ ಗಲಿ ಸೆಕ್ಟರ್ ಎದುರು ಪಾಕಿಸ್ತಾನದ ನಿಕಿಯಾಲ್ ಸೆಕ್ಟರ್’ಗೆ ನುಗ್ಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಮಾಹಿತಿ ಪ್ರಕಾರ, ಪಾಕಿಸ್ತಾನಿ ಸೈನಿಕರು ಡ್ರೋನ್ ವಶಪಡಿಸಿಕೊಂಡಿದ್ದಾರೆ. ನಂತ್ರ ಡ್ರೋನ್ ಹಿಂತಿರುಗಿಸುವಂತೆ ಪಾಕಿಸ್ತಾನಿ ಸೇನೆಗೆ ಹಾಟ್‌ಲೈನ್ ಸಂದೇಶವನ್ನು ಕಳುಹಿಸಲಾಗಿದೆ.
ಭಾರತದ ಅತ್ಯಂತ ‘ಜನಪ್ರಿಯ ಮುಖ್ಯಮಂತ್ರಿ ಪಟ್ಟಿ’ಯಲ್ಲಿ ‘ಯೋಗಿ’ಗೆ ಅಗ್ರ ಪಟ್ಟ ; ಇಲ್ಲಿದೆ ‘ಸಮೀಕ್ಷೆ’ ಲಿಸ್ಟ್!