ನವದೆಹಲಿ : ಭಾರತೀಯ ವಾಯುಪಡೆಯ ಯುಎವಿ ವಿಮಾನ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಅಪಘಾತಕ್ಕೀಡಾಗಿದೆ. ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ವಿಮಾನವು ವಾಡಿಕೆಯ ಹಾರಾಟದಲ್ಲಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಜೈಸಲ್ಮೇರ್ ನ ಪಿಥ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದು ಕಣ್ಗಾವಲು ವಿಮಾನವಾಗಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಹೇಳಿದ್ದಾರೆ. ಘಟನೆಯ ಪ್ರತ್ಯಕ್ಷದರ್ಶಿ ಪರಮ್ವೀರ್ ಸಿಂಗ್ ರಾವತ್, “ವಿಮಾನ ಅಪಘಾತಕ್ಕೀಡಾದಾಗ ನಾವು ಕೊಳವೆ ಬಾವಿಯ ಮೇಲೆ ಕುಳಿತಿದ್ದೆವು. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಭಾರತೀಯ ವಾಯುಪಡೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
#BreakingNews: Indian Air Force UAV crashes in Pithala area of Jaisalmer, no casualties reported.#Pithala #Jaisalmer #IndianAirForce pic.twitter.com/SQcclXI8zp
— Lokmat Times (@lokmattimeseng) April 25, 2024