ಶ್ರೀನಗರ: ಜಮ್ಮುವಿನ ಮೇಲೆ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿ ನಡೆಸಿದೆ. ಪಾಕಿಸ್ತಾನ ನಡೆಸಿದಂತ 8 ಕ್ಷಿಪಣಿಗಳ ದಾಳಿಯನ್ನು ಅಷ್ಟೇ ಸಮರ್ಥವಾಗಿ ಭಾರತ ಹೊಡೆದುರುಳಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ, ಭಾರತ ಆಪರೇಷನ್ ಸಿಂಧೂರ್ ದಾಳಿಯ ಒಂದು ದಿನದ ನಂತ್ರ ಪಾಕಿಸ್ತಾನ ಭಾರತದ ಮೇಲೆ ದಾಳಿಯನ್ನು ನಡೆಸುತ್ತಿದೆ.
ಜಮ್ಮು ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕ್ಷಿಪಣಿ, ಡ್ರೋನ್ ದಾಳಿಯನ್ನು ನಡೆಸಿದೆ. ಜಮ್ಮುವಿನ ಮೇಲೆ ಪಾಕಿಸ್ತಾನ ನಡೆಸಿದಂತ 8 ಕ್ಷಿಪಣಿಗಳನ್ನು ಎಸ್-400 ವಾಯು ರಕ್ಷಣಾ ಪಡೆಯು ಹೊಡೆದುರುಳಿಸಿದೆ.
ಉಧಂಪುರ, ಜಮ್ಮು, ಅಖ್ನೂರ್ ಮತ್ತು ಪಠಾಣ್ಕೋಟ್ನಲ್ಲಿ ಪಾಕಿಸ್ತಾನದಿಂದ ಹಾರಿಸಲಾದ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಭಾರತೀಯ ವಾಯು ಪಡೆಯು ಅಷ್ಟೇ ತೀವ್ರವಾಗಿ ಪ್ರತ್ಯುತ್ತರ ನೀಡಿ ಹೊಡೆದು ಹಾಕಿದೆ.
ಪಠಾಣ್ಕೋಟ್ ಏರ್ವೇಸ್ನಲ್ಲಿ ಸೈರನ್ಗಳು ಮೊಳಗಲು ಪ್ರಾರಂಭಿಸಿದವು. ಅಲ್ಲದೆ, ಪಠಾಣ್ಕೋಟ್ನ ಸುಜನ್ಪುರ ಪ್ರದೇಶದಲ್ಲಿ ಡ್ರೋನ್ ಕಂಡುಬಂದಿದೆ. ಸೇನೆಯು ಡ್ರೋನ್ ಅನ್ನು ಹೊಡೆದುರುಳಿಸಿದೆ.
BREAKING : ಪಾಕಿಸ್ತಾನದ 12 ಕಡೆ ಡ್ರೋನ್ ದಾಳಿಯಲ್ಲಿ ಹಲವರು ಸಾವು : ತುರ್ತು ಸಭೆ ಕರೆದ ಪ್ರಧಾನಿ ಶೆಹಬಾಜ್ ಶರೀಫ್.!