ಬೆಂಗಳೂರು: ಸಾಲ ಕೊಡಿಸುವುದಾಗಿ ಹಣ ಪಡೆದು ವಂಚನೆ ಪ್ರಕರಣದಲ್ಲಿ ಇಂಡಿಯಾ ಬುಲ್ಸ್ ನ್ಯಾಷನಲ್ ಹೆಡ್ ವಿಶ್ವಾಸ್ ಶೆಟ್ಟಿ ವಿರುದ್ದ FIR ದಾಖಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ವಿಶ್ವಾಸ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಮಂಜುನಾಥ ಎಂಬುವರಿಂದ ಮನೆ ಕಟ್ಟಿಸಲು ಲೋನ್ ಕೊಡಿಸುವುದಾಗಿ 5 ಲಕ್ಷ ಕಮೀಷನ್ ಪಡೆದು, ಸಾಲ ಕೊಡಿಸದೇ ವಂಚಿಸಿದಂತ ಪ್ರಕರಣ ಸಂಬಂಧ, ಇಂಡಿಯಾ ಬುಲ್ಸ್ ನ್ಯಾಷನಲ್ ಹೆಡ್ ವಿಶ್ವಾಸ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ, ಸಮ್ಮಾನ್ ಕ್ಯಾಪಿಟಲ್ಸ್ ಕಾರ್ಪೋರೆಟ್ ಲೋನ್ಸ್ ನ್ಯಾಷನಲ್ ಹೆಡ್ ವಿಶ್ವಾಸ್ ಶೆಟ್ಟಿ ವಿರುದ್ಧ ಸಾಲ ಕೊಡಿಸುವುದಾಗಿ ಹಣ ಪಡೆದು ವಂಚನೆ ಆರೋಪ ಮಾಡಿ ದೂರು ನೀಡಿದ್ದರು. ಅಲ್ಲದೇ ಪಡೆದ ಹಣ ದಾಖಲೆ ವಾಪಸ್ಸು ಕೇಳಿದ್ದಕ್ಕೆ ಜಾತಿನಿಂದನೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದರು.
ಈ ದೂರು ಪಡೆದಿದ್ದಂತ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ವಿಶ್ವಾಸ್ ಶೆಟ್ಟಿ ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಅಟ್ರಾಸಿಟಿ ಸೆ 3(1)(r)(s), 3(2)(v-a), BNS 351(3), 352, 318(4),3(5) ಅಡಿ ಕೇಸ್ ದಾಖಲಿಸಿದ್ದಾರೆ.
ಅಂದಹಾಗೇ ಮಂಜುನಾಥ್ ಎಂಬುವವರಿಗೆ ಜಾತಿ ನಿಂದನೆ, ಜೀವ ಬೆದರಿಕೆಯನ್ನು ವಿಶ್ವಾಸ್ ಶೆಟ್ಟಿ ಹಾಕಿದ್ದರು ಎನ್ನಲಾಗಿದೆ. ಮನೆ ಕಟ್ಟಲು ಸಾಲ ಕೊಡಿಸುವುದಾಗಿ 5 ಲಕ್ಷ ಕಮಿಷನ್ ಪಡೆದಿದ್ದರು. ಮೊನ್ನೆ ನಾಗರಬಾವಿ ನಮ್ಮೂರ ತಿಂಡಿ ಬಳಿ ಶೆಟ್ಟಿ & ಆತನ ಗ್ಯಾಂಗ್ ನಿಂದ ಕೃತ್ಯ ನಡೆಸಲಾಗಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ವಾಸ್ ಶೆಟ್ಟಿ ಅನೇಕ ಮಂದಿಗೆ ವಂಚಿಸಿರುವ ಆರೋಪ ಕೂಡ ಕೇಳಿ ಬಂದಿದೆ. ಹಿಂದೆ ಇಂಡಿಯಾ ಬುಲ್ಸ್ ನಲ್ಲಿ ಕಾರ್ಪೊರೆಟ್ ಲೋನ್ ನೋಡಿಕೊಳ್ತಿದ್ದ ಇವರು, ಮಾಲ್ ಗಳು, ಬಿಲ್ಡಿಂಗ್ಸ್, ಹೋಂ ಲೋನ್, ಕೊಡಿಸುತ್ತಿದ್ದರಂತೆ. ಈ ಹಿಂದೆ ವಂಚನೆ ಆರೋಪದಲ್ಲಿ ಇಂಡಿಯಾ ಬುಲ್ಸ್ ಕ್ಲೋಸ್ ಆಗಿತ್ತು. ಜನರ ಒತ್ತಡದ ಹಿನ್ನಲೆ ಸಮ್ಮಾನ್ ಕ್ಯಾಪಿಟಲ್ಸ್ ಅಂತ ಹೆಸರು ಬದಲು ಮಾಡಿ, ಮತ್ತೆ ಶುರುವಾಗಿತ್ತು.
ಸದ್ಯ ಸಮ್ಮಾನ್ ಕ್ಯಾಪಿಟಲ್ಸ್ ಹೆಸರಲ್ಲಿ ಫೈನಾನ್ಸ್ ವ್ಯವಹಾರವನ್ನು ಕಂಪನಿ ನಡೆಸುತ್ತಿದೆ. ಇಂಡಿಯಾ ಬುಲ್ಸ್ ಕಂಪನಿ ಮುಂದೆ ಪ್ರತಿನಿತ್ಯ ಅನೇಕ ಮಂದಿ ಪರದಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಯಾರಿಗೂ ಸಿಗದಂತೆ ವಿಶ್ವಾಸ್ ಶೆಟ್ಟಿ ಓಡಾಡುತ್ತಿದ್ದರು ಎನ್ನಲಾಗಿದೆ. ಈಗ ಅವರನ್ನು ವಂಚನೆ ಆರೋಪದಡಿ ಪೊಲೀಸರು ವಶಕ್ಕೆ ಪಡೆದು, ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
‘ಪ್ರಯಾಗ್ ರಾಜ್’ನ ಯಾವುದೇ ರೈಲ್ವೆ ನಿಲ್ದಾಣಗಳನ್ನು ಬಂದ್ ಮಾಡಿಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು