ಐರ್ಲೆಂಡ್ನಲ್ಲಿ ಭಾರತೀಯ ನಾಗರಿಕರ ಮೇಲೆ ದೈಹಿಕ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಡಬ್ಲಿನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಐರಿಶ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.
ಈ ಘಟನೆಗಳ ಬಗ್ಗೆ ಮಾಹಿತಿ ನೀಡಿರುವ ರಾಯಭಾರ ಕಚೇರಿ, “ಇತ್ತೀಚೆಗೆ ಐರ್ಲೆಂಡ್ನಲ್ಲಿ ಭಾರತೀಯ ನಾಗರಿಕರ ವಿರುದ್ಧ ದೈಹಿಕ ದಾಳಿ ಪ್ರಕರಣಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ರಾಯಭಾರ ಕಚೇರಿ ಐರ್ಲೆಂಡ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ”ಎಂದಿದೆ.
ಐರ್ಲೆಂಡ್ನಲ್ಲಿರುವ ಭಾರತೀಯ ನಾಗರಿಕರಿಗೆ “ವೈಯಕ್ತಿಕ ಭದ್ರತೆ” ಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ನಿರ್ಜನ ಪ್ರದೇಶಗಳನ್ನು ತಪ್ಪಿಸಲು ರಾಯಭಾರ ಕಚೇರಿ ಸಲಹೆ ನೀಡಿದೆ.
ಡಬ್ಲಿನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರ ತುರ್ತು ಸಂಪರ್ಕ ವಿವರಗಳನ್ನು ಬಿಡುಗಡೆ ಮಾಡಿದೆ.
ಐರ್ಲೆಂಡ್ನಲ್ಲಿ ಅಪ್ರಚೋದಿತ ಜನಾಂಗೀಯ ದಾಳಿಯನ್ನು ಎದುರಿಸಿದ್ದೇನೆ ಎಂದು ಭಾರತೀಯ ಮೂಲದ ಉದ್ಯಮಿಯೊಬ್ಬರು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಹದಿಹರೆಯದವರ ಗುಂಪು ತನ್ನನ್ನು ಥಳಿಸಿದೆ ಎಂದು ಉದ್ಯಮಿ ಆರೋಪಿಸಿದ್ದಾರೆ, ಅದರ ನಂತರ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು.