ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಬುಧಾಬಿಯಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡುತ್ತಾ, ಕ್ರೀಡಾಂಗಣದಲ್ಲಿನ ಪ್ರತಿ ಉಸಿರು, ಪ್ರತಿ ಧ್ವನಿ ಭಾರತ-ಯುಎಇ ‘ದೋಸ್ತಿ ಜಿಂದಾಬಾದ್’ (ಭಾರತ-ಯುಎಇ ಸ್ನೇಹವು ದೀರ್ಘಕಾಲ ಬಾಳಲಿ) ಎಂದು ಹೇಳುತ್ತಿದೆ ಎಂದು ಹೇಳಿದರು. ಈ ಮೂಲಕ ಅಬುದಾಬಿಯಲ್ಲಿ ಭಾರತ-ಯುಎಇ ದೋಸ್ತಿ ಜಿಂದಾಬಾದ್ ಮೊಳಗಿತು. ಹಾಗಾದ್ರೇ ಇಂದಿನ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಮುಂದೆ ಓದಿ.
ಅಬುದಾಬಿಯಲ್ಲಿ ಇಂದು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಇಂದು ಅಬುಧಾಬಿಯಲ್ಲಿ ನೀವು ಹೊಸ ಇತಿಹಾಸವನ್ನು ರಚಿಸಿದ್ದೀರಿ. ನೀವು ಯುಎಇಯ ಎಲ್ಲಾ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಎಲ್ಲರ ಹೃದಯ ಸಂಪರ್ಕ ಹೊಂದಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ, ಪ್ರತಿ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಹೇಳುತ್ತದೆ – ಭಾರತ-ಯುಎಇ ಸ್ನೇಹವು ದೀರ್ಘಕಾಲ ಬಾಳಲಿ ಎಂದರು.
#WATCH | At the 'Ahlan Modi' event in Abu Dhabi, PM Modi says, "Today in Abu Dhabi, you have created a new history. You have come here from all corners of the UAE and different states of India. But everyone's heart is connected. At this historic stadium, every heartbeat, every… pic.twitter.com/2VzShb2YAK
— ANI (@ANI) February 13, 2024
ಕುಟುಂಬ ಸದಸ್ಯರನ್ನು ಭೇಟಿಯಾಗಲು ಅಬುಧಾಬಿಗೆ ಬಂದಿದ್ದೇನೆ ಎಂದು ಭಾಸವಾಗುತ್ತಿದೆ. ನೀವು ಹುಟ್ಟಿದ ಮಣ್ಣಿನ ಸುಗಂಧವನ್ನು ನಾನು ತಂದಿದ್ದೇನೆ. 140 ಕೋಟಿ ಜನರಿಗೆ ಸಂದೇಶವನ್ನು ತಂದಿದ್ದೇನೆ. ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂಬುದು ಸಂದೇಶ ಎಂದು ಅವರು ಹೇಳಿದರು.
ತನಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಮೋದಿ ಯುಎಇ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
“ಯುಎಇ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ದಿ ಆರ್ಡರ್ ಆಫ್ ಜಾಯೆದ್ ಅನ್ನು ನನಗೆ ನೀಡಿರುವುದು ನನ್ನ ಅದೃಷ್ಟ. ಈ ಗೌರವ ನನ್ನದು ಮಾತ್ರವಲ್ಲ, ಕೋಟ್ಯಂತರ ಭಾರತೀಯರಿಗೆ, ನಿಮ್ಮೆಲ್ಲರಿಗೂ ಸಲ್ಲುತ್ತದೆ ಎಂದು ಹೇಳಿದರು.
2015 ರಲ್ಲಿ, ನಿಮ್ಮೆಲ್ಲರ ಪರವಾಗಿ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸುವ ಪ್ರಸ್ತಾಪವನ್ನು ನಾನು ಅವರಿಗೆ (ಶೇಖ್ ಮೊಹಮ್ಮದ್ ಬಿನ್ ಜಾಯೆದ್) ಪ್ರಸ್ತುತಪಡಿಸಿದಾಗ, ಅವರು ತಕ್ಷಣ ಅದಕ್ಕೆ ಹೌದು ಎಂದು ಹೇಳಿದರು. ಈಗ ಈ ಭವ್ಯ (ಬಿಎಪಿಎಸ್) ದೇವಾಲಯವನ್ನು ಉದ್ಘಾಟಿಸುವ ಸಮಯ ಬಂದಿದೆ ಎಂದರು.
ಅಂದಹಾಗೇ ಫೆಬ್ರವರಿ 14ರ ನಾಳೆ ಪ್ರಧಾನಿ ಮೋದಿಯವರು ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಇಂದಿನಿಂದ ಎರಡು ದಿನಗಳ ಅಧಿಕೃತ ಭೇಟಿಗಾಗಿ ಯುಎಇಗೆ ತೆರಳಲಿದ್ದು, ಅಲ್ಲಿ ಅವರು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ ಭವ್ಯವಾದ ಬಿಎಪಿಎಸ್ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಇದು 2015 ರಿಂದ ಯುಎಇಗೆ ಮೋದಿಯವರ ಏಳನೇ ಭೇಟಿಯಾಗಿದೆ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ.
ನೀರಾವರಿ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್
‘ಖಾಯಂ ನಿರೀಕ್ಷೆ’ಯಲ್ಲಿದ್ದ ‘ಅತಿಥಿ ಉಪನ್ಯಾಸಕ’ರಿಗೆ ಬಿಗ್ ಶಾಕ್: ‘ಸೇವೆ ಖಾಯಂ’ ಇಲ್ಲ – ‘ರಾಜ್ಯ ಸರ್ಕಾರ’ ಸ್ಪಷ್ಟನೆ