ನವದೆಹಲಿ: ದೇಶದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಮತ್ತು ಆಳ ಸಮುದ್ರ ಕಾರ್ಯಾಚರಣೆಗೆ ಪ್ರಮುಖ ನವೀಕರಣದಲ್ಲಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಜಿತೇಂದ್ರ ಸಿಂಗ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಉಪಕ್ರಮಗಳನ್ನ ಘೋಷಿಸಿದ್ದಾರೆ. 2025ರ ವೇಳೆಗೆ ಭಾರತವು ಬಾಹ್ಯಾಕಾಶ ಮತ್ತು ಆಳ ಸಮುದ್ರದಲ್ಲಿ ಮೊದಲ ಮಾನವನಿಗೆ ಸಾಕ್ಷಿಯಾಗಲಿದೆ ಎಂದು ಸಚಿವರು ಘೋಷಿಸಿದ್ದಾರೆ.
“ಮೂವರು ಗ್ರೂಪ್ ಕ್ಯಾಪ್ಟನ್ಗಳು ಮತ್ತು ಒಬ್ಬ ವಿಂಗ್ ಕಮಾಂಡರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನ ಭಾರತದ ಮಾನವ ಬಾಹ್ಯಾಕಾಶ ಮಿಷನ್ ಗಗನಯಾನಕ್ಕೆ ಆಯ್ಕೆ ಮಾಡಲಾಗಿದೆ” ಎಂದು ಸಚಿವರು ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಗಗನಯಾನ ಮಿಷನ್ ಮಾನವಸಹಿತ ಮೂರು ದಿನಗಳ ಮಿಷನ್’ನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನ ಹೊಂದಿದೆ. ಇದು ಭೂಮಿಯಿಂದ 400 ಕಿ.ಮೀ ಎತ್ತರದಲ್ಲಿ ಕಕ್ಷೆಗೆ ತಲುಪುತ್ತದೆ ಮತ್ತು ಹಿಂತಿರುಗುತ್ತದೆ.
ಭಾರತೀಯ ವಾಯುಪಡೆಯ ನಾಲ್ವರು ಗ್ರೂಪ್ ಕ್ಯಾಪ್ಟನ್ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್ ಮತ್ತು ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನ 2025ರ ಮಿಷನ್ಗೆ ಆಯ್ಕೆ ಮಾಡಲಾಗಿದೆ. “ಭಾರತದ ಆಳ ಸಮುದ್ರ ಮಿಷನ್ 2025ರಲ್ಲಿ ಮೂವರು ಭಾರತೀಯರನ್ನು ಆಳ ಸಮುದ್ರಕ್ಕೆ ಕಳುಹಿಸುತ್ತದೆ” ಎಂದು ಸಚಿವರು ಹಂಚಿಕೊಂಡರು.
‘ಗೇಲಿಯಿಂದ ಚಪ್ಪಾಳೆಗಳವರೆಗೆ’ : ವಾಂಖೆಡೆಯೊಳಗೆ ಪ್ರತಿಧ್ವನಿಸಿದ ‘ಹಾರ್ದಿಕ್, ಹಾರ್ದಿಕ್’ ಜಯಘೋಷ
ಅಮಾವಾಸ್ಯೆಯ ದಿನ ಕತ್ತರಿಸಿದ ಉಗುರನ್ನು ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತೆ
Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್’ಗೆ 28 ಸದಸ್ಯರ ಅಥ್ಲೆಟಿಕ್ಸ್ ತಂಡ ಪ್ರಕಟ ; ‘ನೀರಜ್ ಚೋಪ್ರಾ’ ಸಾರಥ್ಯ