ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ 475 ವಂದೇ ಭಾರತ್(Vande Bharat Express) ರೈಲುಗಳನ್ನು ಉತ್ಪಾದಿಸುವ ಗುರಿ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.

ಭಾರತೀಯ ರೈಲ್ವೆಯು ಬಳಕೆದಾರರಿಗೆ ವೇಗದ ಪ್ರಯಾಣಕ್ಕಾಗಿ ಇತ್ತೀಚೆಗೆ ʻವಂದೇ ಭಾರತ್ ಎಕ್ಸ್‌ಪ್ರೆಸ್ ರೂಪದಲ್ಲಿ ಒಂದೆರಡು ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಅನುವು ಮಾಡಿಕೊಟ್ಟಿದೆ. 2025 ರ ವೇಳೆಗೆ ಭಾರತವು ಒಟ್ಟು 475 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೊಂದಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದೃಢಪಡಿಸಿದ್ದಾರೆ.

ಸಮಾವೇಶದಲ್ಲಿ ಬುಲೆಟ್ ರೈಲುಗಳ ಆಗಮನದ ಬಗ್ಗೆ ಅವರು ಮಾತನಾಡಿದ ವೈಷ್ಣವ್, 475 ರೈಲುಗಳ ಉತ್ಪಾದನೆ ಯೋಜನೆ ಪ್ರಗತಿಯಲ್ಲಿದೆ. 2026ರ ವೇಳೆಗೆ ದೇಶದಲ್ಲಿ ಬುಲೆಟ್ ರೈಲುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು.

ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ 138 ನಿಲ್ದಾಣಗಳಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, 57 ನಿಲ್ದಾಣಗಳಿಗೆ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. 475 ವಂದೇ ಭಾರತ್ ರೈಲುಗಳನ್ನು ಹೊಂದುವ ಗುರಿ ಇದೆ. ಕಳೆದ ಬಜೆಟ್‌ನಲ್ಲಿ 400 ರೈಲುಗಳನ್ನು ಮಂಜೂರು ಮಾಡಲಾಗಿತ್ತು ಮತ್ತು ಅದಕ್ಕೂ ಮೊದಲು 75 ಮಂಜೂರು ಮಾಡಲಾಗಿತ್ತು. ಮುಂಬರುವ ಮೂರು ವರ್ಷಗಳಲ್ಲಿ ನಾವು ಸಂಪೂರ್ಣ ಗುರಿಯನ್ನು ಸಾಧಿಸುತ್ತೇವೆ” ಎಂದು ಹೇಳಿದರು.

BREAKING NEWS : ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ : ಧವನ್ ,ಗಿಲ್, ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ : ಟೀಂ ಇಂಡಿಯಾ 306/7

BIGG NEWS : ಏರ್ ಇಂಡಿಯಾ ‘ಹೊಸ ರೂಲ್ಸ್‌ ‘: ಕೂದಲು ಉದುರಿದ ಪುರುಷರು ಫುಲ್ ಶೇವ್ ಮಾಡ್ಬೇಕು, ಮಹಿಳೆಯರು ಚಿನ್ನ, ವಜ್ರಾಭರಣ ಮಾತ್ರ ಧರಿಸ್ಬೇಕು | Air India Rules

BIG NEWS: ಮನೆಯಲ್ಲಿ `ಆಮ್ ಆದ್ಮಿ ಪಕ್ಷ’ದ ಮುಖಂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | AAP Leader Found Hanging

BREAKING NEWS : ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ : ಧವನ್ ,ಗಿಲ್, ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ : ಟೀಂ ಇಂಡಿಯಾ 306/7

Share.
Exit mobile version