ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದೆ.

55 ವರ್ಷದ ಸಂದೀಪ್ ಭಾರದ್ವಾಜ್ ಎಂದು ಗುರುತಿಸಲಾದ ವ್ಯಕ್ತಿಯ ಶವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿಸಿದು ಸ್ಥಳಕ್ಕೆ ಅಪರಾಧ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಭಾರದ್ವಾಜ್ ಮಾರ್ಬಲ್ಸ್ ಮಾಲೀಕನಾಗಿದ್ದಾರೆ. ಪತ್ನಿಯಿಂದ ವಿಚ್ಛೇದನ ಪಡೆದಿರುವ ಭಾರದ್ವಾಜ್ ತಮ್ಮಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನೊಂದಿಗೆ ವಾಸಿಸುತ್ತಿದ್ದರು.

ಸಂದೀಪ್ ಸಾವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ. ಈ ಸಾವಿನ ಸುದ್ದಿ ತಿಳಿಯುತ್ತಿದ್ದ ಬೆನ್ನಲ್ಲೇ ಬಿಜೆಪಿ ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದೆ.

“ಎಎಪಿ ಕಾರ್ಯಕರ್ತ ಸಂದೀಪ್ ಭಾರದ್ವಾಜ್ ಅವರ ಅಕಾಲಿಕ ನಿಧನದ ಬಗ್ಗೆ ತುಂಬಾ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಈ ದುಃಖದ ಸಮಯದಲ್ಲಿ, ನಮ್ಮ ಸಂತಾಪಗಳು ಅವರೊಂದಿಗಿವೆ ಮತ್ತು ಇಡೀ ಪಕ್ಷವು ಅವರ ಸಂಬಂಧಿಕರೊಂದಿಗೆ ನಿಂತಿದೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

BIGG NEWS : ಏರ್ ಇಂಡಿಯಾ ‘ಹೊಸ ರೂಲ್ಸ್‌ ‘: ಕೂದಲು ಉದುರಿದ ಪುರುಷರು ಫುಲ್ ಶೇವ್ ಮಾಡ್ಬೇಕು, ಮಹಿಳೆಯರು ಚಿನ್ನ, ವಜ್ರಾಭರಣ ಮಾತ್ರ ಧರಿಸ್ಬೇಕು | Air India Rules

BIGG NEWS : ನನ್ನ ವಿರುದ್ಧ ಷಡ್ಯಂತ್ರ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ : ಉದ್ಯಮಿ ವಿದ್ಯಾಭರಣ್ ಸ್ಪಷ್ಟನೆ

ಮಹಿಳೆಗೆ ನಿಂದಿಸಿದ ಆಡಿಯೋ ವೈರಲ್:‌ ಉನ್ನತ ಸ್ಥಾನಗಳಿಂದ ತಮಿಳುನಾಡು ಬಿಜೆಪಿ ನಾಯಕ ಅಮಾನತು

BIGG NEWS : ಏರ್ ಇಂಡಿಯಾ ‘ಹೊಸ ರೂಲ್ಸ್‌ ‘: ಕೂದಲು ಉದುರಿದ ಪುರುಷರು ಫುಲ್ ಶೇವ್ ಮಾಡ್ಬೇಕು, ಮಹಿಳೆಯರು ಚಿನ್ನ, ವಜ್ರಾಭರಣ ಮಾತ್ರ ಧರಿಸ್ಬೇಕು | Air India Rules

Share.
Exit mobile version