ನವದೆಹಲಿ : 2030 ರ ಯೂತ್ ಒಲಿಂಪಿಕ್ಸ್ ಮತ್ತು 2036 ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಪ್ರಯತ್ನದಲ್ಲಿ ಭಾರತ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನುರಾಗ್ ಠಾಕೂರ್, “ಆತಿಥೇಯರಿಗೆ ಆಹ್ವಾನದೊಂದಿಗೆ, ಭಾರತವು ಅದನ್ನು ಆಯೋಜಿಸಲು ಸಿದ್ಧವಾಗಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಲಾಸ್ ಏಂಜಲೀಸ್ ಹಾಗೂ ಬ್ರಿಸ್ಬೇನ್ ಗೆ ಕ್ರಮವಾಗಿ 2028 ಮತ್ತು 2032ರ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳನ್ನು ನೀಡಲಾಗಿದೆ. ‘
ನಾವು ಐದನೇ ಅತಿದೊಡ್ಡ ಆರ್ಥಿಕತೆ ಮತ್ತು ಯುವ ಶಕ್ತಿಯನ್ನು ಹೊಂದಿದ್ದೇವೆ. ಕ್ರೀಡೆಗೆ ಭಾರತಕ್ಕಿಂತ ದೊಡ್ಡ ಮಾರುಕಟ್ಟೆ ಇಲ್ಲ. ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. “ಯುಕೆಯಿಂದ ಸುಮಾರು 4,000 ಕ್ರಿಕೆಟ್ ಅಭಿಮಾನಿಗಳು ಹಿಮಾಚಲ ಪ್ರದೇಶಕ್ಕೆ ಬಂದು ಧರ್ಮಶಾಲಾದ ಕ್ರೀಡಾಂಗಣವನ್ನು ಶ್ಲಾಘಿಸಿದ್ದರು.