ನವದೆಹಲಿ: ಇಂದು 6.3ರ ತೀವ್ರತೆಯಲ್ಲಿ ಪ್ರಬಲ ಭೂಕಂಪನ ಅಫ್ಘಾನಿಸ್ತಾನದಲ್ಲಿ ಉಂಟಾಗಿತ್ತು. ಈ ಭೂಕಂಪದಿಂದಾಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಅಫ್ಘಾನ್ ಜನತೆಯ ನೆರವಿಗೆ ಭಾರತ ದಾವಿಸಿದ್ದು, 1000 ಫ್ಯಾಮಿಲಿ ಟೆಂಟ್ ಗಳನ್ನು ರವಾನಿಸಿದೆ.
ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ರವಿಶಂಕರ್ ಮಾಹಿತಿ ಹಂಚಿಕೊಂಡಿದ್ದು, ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಜೊತೆಗೆ ಚರ್ಚೆ ನಡೆಸಲಾಗಿದೆ. ಪ್ರಧಾನಿ ಮೋದಿಯವರ ಸೂಚನೆಯಂತೆ ಅಫ್ಘಾನಿಸ್ತಾನಕ್ಕೆ ಭಾರತ ಎಲ್ಲಾ ರೀತಿಯ ನೆರವಾಗುವುದಾಗಿ ಹೇಳಿದರು.
ಇಂದು ಭಾರತದಿಂದ 1000 ಫ್ಯಾಮಿಲಿ ಟೆಂಟ್ ಗಳನ್ನು ಅಫ್ಘಾನಿಸ್ತಾನಕ್ಕೆ ರವಾನಿಸಲಾಗಿದೆ. 15 ಟನ್ ಆಹಾರ ಸಾಮಗ್ರಿ ಕೂಡ ಕಳುಹಿಸುತ್ತಿದ್ದೇವೆ. ನಾಳೆ ಕೂಡ ಎಲ್ಲಾ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತೇವೆ. ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದರು.
BREAKING: ಧರ್ಮಸ್ಥಳ ಬಿಜೆಪಿ ಸಮಾವೇಶದ ಭಾಷಣದಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂದು ಅಶೋಕ್ ಎಡವಟ್ಟು