ನವದೆಹಲಿ: ಕದನ ವಿರಾಮಕ್ಕೆ ಒಪ್ಪಿದ ನಂತ್ರವೂ ಪಾಕಿಸ್ತಾನ ಜಮ್ಮು ಸೇರಿದಂತೆ ವಿವಿಧ ಭಾರತದ ಸ್ಥಳಗಳ ಮೇಲೆ ಡ್ರೋನ್, ಕ್ಷಿಪಣಿ ಬಳಸಿ ದಾಳಿ ನಡೆಸಿತ್ತು. ಈ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಈ ನಂತ್ರ ಇಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳು ಮಾತುಕತೆ ನಡೆಸಿದರು. ಈ ಮಾತುಕತೆಯ ವೇಳೆ ಕದನ ವಿರಾಮ ಉಲ್ಲಂಘಿಸಲ್ಲ ಎಂಬುದಾಗಿ ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಆಪರೇಷನ್ ಪಹಲ್ಗಮ್ ನಂತರ ದೇಶಗಳು ಕದನ ವಿರಾಮ ಘೋಷಿಸಿದ ಎರಡು ದಿನಗಳ ನಂತರ, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಸೋಮವಾರ ಸಂಜೆ ಸಭೆ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Indo-Pak DGMO talks completed for today : Sources pic.twitter.com/G0WJOpNzKx
— ANI (@ANI) May 12, 2025
ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ಮುಂದೆ ಭಾರತದ ಮೇಲೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುವುದಿಲ್ಲ ಎಂಬುದಾಗಿ ಪಾಕಿಸ್ತಾನದ ಡಿಜಿಎಂಒ ಸ್ಪಷ್ಟಪಡಿಸಿರೋದಾಗಿ ತಿಳಿದು ಬಂದಿದೆ.
ಕ್ಷಣ ಕ್ಷಣದ ಅಪ್ ಡೇಟ್ ಗಾಗಿ ಕನ್ನಡ ನ್ಯೂಸ್ ನೌ ಗ್ರೂಪ್ ಸೇರಲು https://chat.whatsapp.com/CNpi9mmm5Vt1xuAhzmInmT ಲಿಂಕ್ ಕ್ಲಿಕ್ ಮಾಡಿ
ಇನ್ನೂ ಈ ಬೆಳವಣಿಗೆಯ ನಡುವೆ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore