ಪಂಜಾಬ್: ಭಾರತ ಬುದ್ಧ ಮತ್ತು ಗುರು ಗೋವಿಂದ ಸಿಂಗ್ ಜೀ ಅವರ ನಾಡು ಎಂದು ಪ್ರಧಾನಿಯವರು ಆದಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆಯಲ್ಲ. ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಣಾಯಕತೆಯ ಸಂಗಮ. ಭಾರತ ಬುದ್ಧ ಹಾಗೂ ಗುರು ಗೋವಿಂದ ಸಿಂಗ್ ಜೀ ಅವರ ಭೂಮಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಬೆಂಬಲಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಮಾಸ್ಟರ್‌ಮೈಂಡ್‌ಗಳನ್ನು ನಾವು ಪ್ರತ್ಯೇಕ ಘಟಕಗಳಾಗಿ ನೋಡುವುದಿಲ್ಲ. ಭಾರತದ ಹೊಸ ರೂಪ, ಅದರ ಹೊಸ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಜಗತ್ತು ಕೂಡ ಮುಂದುವರಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ.
#WATCH | At the Adampur Air Base, PM Narendra Modi says "…Aatank ke aakao ko samajh aa gaya hai ki Bharat ki ore nazar uthane ka ek hi anjaam hoga- tabaahi aur mahavinaash…"
He says "You attacked them from the front and killed them. You destroyed all the big bases of… pic.twitter.com/B19UVZrY4f
— ANI (@ANI) May 13, 2025
ಭಾರತ ಯಾವುದೇ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ ಎಂದು ಪ್ರಧಾನಿಯವರು ಆದಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ನಾವು ನಮ್ಮ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತೇವೆ ಎಂದು ಪ್ರಧಾನಿ ಅದಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳುತ್ತಾರೆ.
“ಭಯೋತ್ಪಾದನೆಯ ವಿರುದ್ಧ ಭಾರತದ ‘ಲಕ್ಷ್ಮಣ ರೇಖೆ’ ಈಗ ಸ್ಪಷ್ಟವಾಗಿದೆ. ಈಗ ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ, ಭಾರತ ತಕ್ಕ ಉತ್ತರ ನೀಡುತ್ತದೆ – ಘನ ಪ್ರತ್ಯುತ್ತರ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಸಶಸ್ತ್ರ ಪಡೆಗಳ ದಾಳಿಯಲ್ಲ, ಭಾರತದ ನೀತಿ, ಉದ್ದೇಶ, ನಿರ್ಧಾರ ಸಂಕೇತ: ಪ್ರಧಾನಿ ಮೋದಿ