ಬೆಂಗಳೂರು: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಂತ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನ ಯಾತ್ರಿಗಳು 18 ದಿನಗಳ ನಂತ್ರ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಈ ಸಾಧನೆಯನ್ನು ಕೊಂಡಾಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈ ದಿನ ಹೊಸ ಮೈಲಿಗಲ್ಲು ಸಾಧಿಸಿದೆ ಎಂದಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಯಶಸ್ವಿ ಬಾಹ್ಯಾಕಾಶ ಯಾತ್ರೆಯನ್ನು ಮುಗಿಸಿ, ಸುರಕ್ಷಿತವಾಗಿ ಭೂಮಿಗೆ ಮರಳಿದ ಶುಭಾಂಶು ಶುಕ್ಲಾ ಅವರನ್ನು ದೇಶವಾಸಿಗಳ ಪರವಾಗಿ ಸ್ವಾಗತಿಸುತ್ತೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿನೀಡಿದ ಮೊದಲ ಭಾರತೀಯನೆಂಬ ದಾಖಲೆ ಬರೆದ ಅವರಿಗೆ ಅಭಿನಂದನೆಗಳು. ಇಡೀ ರಾಷ್ಟ್ರ ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡು ಹೆಮ್ಮೆಪಡುತ್ತಿದೆ ಎಂದಿದ್ದಾರೆ.
ಶುಭಾಂಶು ಶುಕ್ಲಾರವರು ತಮ್ಮ ಪರಿಶ್ರಮ ಮತ್ತು ಧೈರ್ಯದ ಮೂಲಕ ಕೋಟ್ಯಂತರ ಜನರ ಕನಸುಗಳಿಗೆ ರೆಕ್ಕೆಯಾಗಿದ್ದಾರೆ. ಅವರ ಈ ಬಾಹ್ಯಾಕಾಶ ಪಯಣವು ಭವಿಷ್ಯದ ಸಂಶೋಧನೆಗಳ ಹಾದಿಯನ್ನು ಸುಗಮವಾಗಿಸಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈ ದಿನ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದ್ದಾರೆ.
I extend my heartfelt congratulations to Shubhanshu Shukla on the successful completion of his space journey and safe return to Earth. As the first Indian to visit the International Space Station, he has scripted history and made the entire country proud.
Through his grit and… pic.twitter.com/Iku8zdSd0H
— Siddaramaiah (@siddaramaiah) July 15, 2025
BIG NEWS: ‘ಮಾಸಿದ ರಾಷ್ಟ್ರಧ್ವಜ’ ಹಾರಿಸಿ ಅಪಮಾನ ಮಾಡಿದ ‘PDO’ಗೆ ಶಾಕ್: ವಿವರಣೆ ಕೇಳಿ ‘EO ನೋಟಿಸ್’