ನವದೆಹಲಿ: ಭಾರತ ಪಾಕಿಸ್ತಾನದ ವಿವಿಧ ಪ್ರದೇಶಗಳ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನದ ಲಾಹೋರ್ ನಲ್ಲಿದ್ದಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಆಕಾಶ್ ಕ್ಷಿಪಣಿ ಬಳಸಿ ಧ್ವಂಸಗೊಳಿಸಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನ ಉಳಿದ ಪಂದ್ಯಗಳನ್ನು ಕರಾಚಿಗೆ ಸ್ಥಳಾಂತರಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಘೋಷಿಸಿದೆ. ಇದಕ್ಕೆ ಕಾರಣ ರಾವಲ್ಪಿಂಡಿ ಸ್ಟೇಡಿಯಂ ಮೇಲೆ ಡ್ರೋನ್ ದಾಳಿ ನಡೆಸಿ, ಧ್ವಂಸಗೊಳಿಸಿದ್ದಕ್ಕಾಗಿ ಆಗಿದೆ.
ಲಾಹೋರ್ನಲ್ಲಿ ಇಂದು ನಿಗದಿಯಾಗಿದ್ದ ಎಲ್ಲಾ ಬೋರ್ಡ್ ಪರೀಕ್ಷೆಗಳನ್ನು ಬ್ರಿಟಿಷ್ ಕೌನ್ಸಿಲ್ ರದ್ದುಗೊಳಿಸಿದೆ. “ಅಭ್ಯರ್ಥಿಗಳ ಸುರಕ್ಷತೆಯನ್ನು ಪ್ರಾಥಮಿಕ ಕಾಳಜಿಯಾಗಿಟ್ಟುಕೊಂಡು ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಕೌನ್ಸಿಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಹೊರತಾಗಿಯೂ ಎಲ್ಲಾ ಪರೀಕ್ಷೆಗಳು ಯೋಜಿಸಿದಂತೆ ಮುಂದುವರಿಯುತ್ತವೆ ಎಂದು ನಿನ್ನೆಯಷ್ಟೇ ಬ್ರಿಟಿಶ್ ಕೌನ್ಸಿಲ್ ಪಾಕಿಸ್ತಾನ ಘೋಷಿಸಿತ್ತು.
ಮತ್ತೊಂದೆಡೆ ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಪಾಡ್ಕಾಸ್ಟ್ಗಳು ಸೇರಿದಂತೆ ಪಾಕಿಸ್ತಾನ ಮೂಲದ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತದ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಸೂಚಿಸಲಾಗಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕಾರ್ಯಗತದ ನಿಖರತೆ ಊಹಿಸಲಾಗದು: ರಾಜನಾಥ್ ಸಿಂಗ್ | Operation Sindoor