ರಾಜ್ಕೋಟ್ : ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 500 ವಿಕೆಟ್ ಪಡೆದ ಭಾರತದ ಮೊದಲ ಮತ್ತು ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದಾರೆ.
ರಾಜ್ಕೋಟ್’ನ ನಿರಂಜನ್ ಶಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ (ಫೆಬ್ರವರಿ 16) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅವರು ಮೊದಲ ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಇಂಗ್ಲೆಂಡ್ನ ಜಾಕ್ ಕ್ರಾಲೆ ಅವರನ್ನ ಔಟ್ ಮಾಡುವ ಮೂಲಕ ಈ ಮೈಲಿಗಲ್ಲನ್ನ ಸಾಧಿಸಿದರು.
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 619 ವಿಕೆಟ್ಗಳ ದಾಖಲೆಯನ್ನ ಹೊಂದಿರುವ ಅನಿಲ್ ಕುಂಬ್ಳೆ ನಂತರ ಅಶ್ವಿನ್ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಶ್ರೀಲಂಕಾದ ಸ್ಪಿನ್ನರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 800 ವಿಕೆಟ್ ಪಡೆದ ದಾಖಲೆಯನ್ನ ಹೊಂದಿದ್ದಾರೆ.
BREAKING : ವಿಮಾನಯಾನ ಸಂಸ್ಥೆ ‘ಗೋ ಫಸ್ಟ್’ ಸ್ವಾಧೀನಕ್ಕೆ ‘ಸ್ಪೈಸ್ ಜೆಟ್’ನಿಂದ ಜಂಟಿ ಬಿಡ್ ಸಲ್ಲಿಕೆ