ಸಿಡ್ನಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ODI ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಇಂದು (ಅಕ್ಟೋಬರ್ 25) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತಕ್ಕೆ 237 ರನ್‌ಗಳ ಗುರಿಯನ್ನು ನೀಡಿತು. 32 ಓವರ್‌ಗಳ ನಂತರ ಭಾರತದ ಸ್ಕೋರ್ 195-1. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರೀಸ್’ನಲ್ಲಿದ್ದು, ರೋಹಿತ್ ಶರ್ಮಾ ಅದ್ಭುತ ಶತಕ ಗಳಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸುವ ಮೂಲಕ ಕುಮಾರ್ ಸಂಗಕ್ಕಾರ ಅವರನ್ನ ಹಿಂದಿಕ್ಕಿ ಏಕದಿನ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಎರಡನೇ ಇನ್ನಿಂಗ್ಸ್’ನ 32 ನೇ ಓವರ್‌ನಲ್ಲಿ 54* ರನ್ ಗಳಿಸುವ ಮೂಲಕ, ಕೊಹ್ಲಿ ತಮ್ಮ 305ನೇ ಏಕದಿನ ಪಂದ್ಯದಲ್ಲಿ 14,235 ರನ್ ಗಳಿಸಿದರು, 404 ಪಂದ್ಯಗಳಲ್ಲಿ ಸಂಗಕ್ಕಾರ ಅವರ 14,234 ರನ್’ಗಳನ್ನು ಹಿಂದಿಕ್ಕಿದರು.
ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ 7 ವಿಕೆಟ್’ಗಳಿಂದ ಸೋತಿತು. ಅಡಿಲೇಡ್’ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆತಿಥೇಯರ ವಿರುದ್ಧ 2 ವಿಕೆಟ್’ಗಳಿಂದ ಸೋಲುಂಡಿತು. ಈಗ, ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡವು ತನ್ನ ಹೆಮ್ಮೆಯನ್ನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ರನ್ ಚೇಸ್’ನಲ್ಲಿ ನಾಯಕ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಭಾರತಕ್ಕೆ ಸ್ಥಿರವಾದ ಆರಂಭವನ್ನ ನೀಡಿದರು, 69 ರನ್’ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಪಾಲುದಾರಿಕೆಯನ್ನ ಜೋಶ್ ಹ್ಯಾಜಲ್‌ವುಡ್ ಮುರಿದು ಶುಭಮನ್’ನ್ನು ಔಟ್ ಮಾಡಿದರು. ಅಲ್ಲಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದ್ಭುತ ಪಾಲುದಾರಿಕೆಯನ್ನ ನೀಡಿದರು.
“PoKಯಲ್ಲಿ ಜನರ ಮೇಲಿನ ದಬ್ಬಾಳಿಕೆ ನಿಲ್ಲಿಸಿ” : ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತ ವಾಗ್ದಾಳಿ, ಖಡಕ್ ಎಚ್ಚರಿಕೆ
ಸಮಾಜಮುಖಿಯಾಗಿ ಸೇವೆ ಸಲ್ಲಿಸಿ: ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿ ಮಾತು
History! ದಾಖಲೆ ಬರೆದ ‘ವಿರಾಟ್ ಕೊಹ್ಲಿ’ ; ಏಕದಿನ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಹೆಗ್ಗಳಿಕೆ








